FLYOVER AT KENGERI.

       ಕೆಂಗೇರಿಯಲ್ಲಿನ  ಮೇಲ್ದಾರಿ.




         ಮೈಸೂರು- ಬೆಂಗಳೂರು ರಸ್ತೆಯಲ್ಲಿನ ಕೆಂಗೇರಿಯ ಮೇಲ್ದಾರಿಸೇತುವೆ  ನನ್ನ ಪ್ರಕಾರ ಪ್ರೇಕ್ಷಣೀಯವೇ.  ಸೂರ್ಯಾಸ್ತದ ಸಮಯದಲ್ಲಿ ಆ ಕಮಾನಿನ ತುದಿಯಲ್ಲಿ ಮೂಡಿಬರುವ  ಸೂರ್ಯನ ಬಿಂಬವು  ದೃಶ್ಯದ ಒಟ್ಟಂದಕ್ಕೆ ಬಲು ಪೂರಕವಾಗಿ, ಮನೋಹರವಾಗಿರುತ್ತದೆ. 

        ಪ್ರಸ್ತುತ ಪ್ರಸಂಗದಲ್ಲಿ.   ನನ್ನ ಕೈಯಲ್ಲಿ ಡಿಎಸ್ಎಲ್ಆರ್  ಇರಲಿಲ್ಲ, ಬದಲಾಗಿ ಕಿರುಕ್ಯಾಮೆರಾ [Compact Camera] ಮಾತ್ರ ಇದ್ದಿತು. ಹಾಗಾಗಿ CA ಮುಂತಾದ ವೈಕಲ್ಯಗಳು  ಅಧಿಕವಾಗಿವೆ.   ಸೂರ್ಯಾಸ್ತವಾದ   ಕೆಲವೇ ಕ್ಷಣಗಳಲ್ಲಿ  ಸೆರೆಸಿಕ್ಕ ನೋಟ ಹೀಗೆ. ನೆಲೆಮಟ್ಟದಲ್ಲಿರುವ ರಸ್ತೆದೀಪದ ಕಂಬವಾದರೂ ತಗ್ಗಿನಪಾತಳಿಯಿಂದ ಮೇಲುಗಡೆಗೆ ನೋಡುವ ವಿವೀಕ್ಷೆಗೆ  ಸೇತುವೆಯ ಕಮಾನಿನ ಎತ್ತರವೇ  ಕಾಣುತ್ತದೆ  ಹಾಗೂ  ಚಿತ್ರದ ಬಹುಪಾಲು ತುಂಬಿರುವ  ಈ ಕಮಾನಿಗೆ ಪ್ರತ್ಯರ್ಥಿಯಾಗಿ  ಒಂಟಿಯಾಗಿ  ಸಾಟಿಯಾಗಿ ನಿಂತಿದೆ.  ಹಿನ್ನೆಲೆಯಲ್ಲಿನ ದೇದೀಪ್ಯಮಾನವಾದ ಆಕಾಶವು  ಈ ಇಡೀ ಮೇಲಾಟಕ್ಕೆ  ವೇದಿಕೆಯನ್ನೊದಗಿಸಿದೆ. 





Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....