CANAL CORNER.

ಕಾಲುವೆ ಮೂಲೆ. 



        ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ  [ಮೈಸೂರಿನಿಂದಹೊರಟು]  ಫನ್ ಫೋರ್ಟ್ ವಿಹಾರಸ್ಥಾನ ದಾಟಿದ ಮೇಲೆ  ಸ್ವಲ್ಪ ಮುಂದಿರುವ  ಕಾಲ್ದಾರಿಯೊಂದರಲ್ಲಿ ಎಡಗಡೆ ಸಾಗಿದರೆ ಸುಮಾರು ನೂರು ಮಾರು ದೂರದಲ್ಲಿ ದೇವರಾಜ ನಾಲೆ  ಎದುರಾಗುತ್ತದೆ.  ಈ ತಾಣದಲ್ಲಿ ಕಾಲುವೆ ಕುದುರೆಲಾಳದ ಆಕಾರದಲ್ಲಿ  ತಿರುವು ಪಡೆದಿದೆ- ಹಾಗಾಗಿ ಮೂಲೆ ಎಂದು ಕರೆಯಲ್ಪಡುತ್ತದೆ.  ಈ ತಿರುವಿನ ನೇರ ಹಿನ್ನೆಲೆಯಲ್ಲಿ  ಪಾಲಹಳ್ಳಿ ರೈಲುನಿಲ್ದಾಣವಿದೆ.  ಹೆದ್ದಾರಿಯಿಂದ ಕೂಗಳತೆ  ದೂರದಲ್ಲಿರುವ  ಈ ಕಾಲುವೆ ಮೂಲೆ  ಪ್ರಶಾಂತವಾದ ಸ್ಥಳ.   ಪಕ್ಷಿಛಾಯಾಗ್ರಾಹಕರು ಕೆಲವರು ಆಗಾಗ ಬರುವುದುಂಟು. ಸ್ಥಳೀಯ ಬಾಲಕರು  ಜಲವಿಹಾರಕ್ಕೆಂದೂ  ಇಲ್ಲಿಗೆ ಬರುವರು.  ಕಾಲುವೆಯಲ್ಲಿ ನೀರು ಹರಿವಿದ್ದಾಗ  ಅದ್ಭುತರಮ್ಯದೃಶ್ಯವೊಂದು   ಸಂಭವಿಸುತ್ತದೆ-  ಸೂರ್ಯಾಸ್ತದ ವೇಳೆಗೆ.  ಇತ್ತೀಚೆಗಿನ ದಿನಗಳಲ್ಲಿ ನಾನು ಪದೇ ಪದೇ ಎಡತಾಕುವ  ತಾಣವಿದು. 

        ಡಿಜಿಟಲ್ ಕ್ಯಾಮರಾದಲ್ಲಿ ಸರಣಿಚಿತ್ರಗಳನ್ನು ತೆಗೆದು  ಆಮೇಲೆ  ತಂತ್ರಾಂಶದ ನೆರವಿನಿಂದ  ಅವುಗಳನ್ನು ಒಂದೇ ಚಿತ್ರವಾಗುವಂತೆ  ಹೊಲಿಯುವ - ಫೋಟೋಸ್ಟಿಚಿಂಗ್  ಕ್ರಮದಲ್ಲಿ    ಸರಳರೇಖೆಯಲ್ಲಿರುವ ದೃಶ್ಯಗಳನ್ನು ಜೋಡಿಸಿದರೂ ಅವು ಹೀಗೆ ಮಧ್ಯಭಾಗದಲ್ಲಿ  ವಕ್ರೀಭವಿಸಿಯೇ ಕಾಣುತ್ತವೆ.  ಆದರೆ ಇಲ್ಲಿ ಹಾಗಲ್ಲ. ೨೪ಮಿಮೀ  ಅಳತೆಯ ಮಸೂರವನ್ನು ಬಳಸಿದರೆ ಒಂದೇ ತುತ್ತಿಗೆ ಇಡೀ ವಿಸ್ತಾರವನ್ನು ಸೆರೆಹಿಡಿಯಬಹುದು.  ಸೂರ್ಯಾಸ್ತದ ಸಮಯದಲ್ಲಿ ಪ್ರತಿಬಿಂಬವೂ ಸೇರಿ  ದೃಶ್ಯವನ್ನು ಮತ್ತಷ್ಟು ಚಂದವಾಗಿಸುತ್ತದೆ.  ಇಲ್ಲಿ ನಾನು ಕ್ಯಾಮರಾದಲ್ಲಿರುವ ಬೆಳಕಿನ ವರ್ಣನಿರ್ಣಯವನ್ನು ಪಲ್ಲಟಗೊಳಿಸಿ  ಈ ಪರಿಣಾಮವನ್ನು  ತಂದುಕೊಂಡೆನು- ಸೂರ್ಯಾಸ್ತದ ವರೆಗೂ ಕಾಯುವಷ್ಟು ಸಮಯಾವಕಾಶವೆನಗಿರಲಿಲ್ಲ.  

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....