KODIBAYI KATTE AREA.
ಕಾಲುವೆ-ಕಾಲುದಾರಿ. ಕೆ. ಆರ್. ಎಸ್ ಪರಿಸರದಲ್ಲಿನ ವಿಶ್ವೇಶ್ವರಯ್ಯ ಕಾಲುವೆಯ ಪಕ್ಕದ ದಾರಿಯಲ್ಲೇ ಸಾಗಿದರೆ, ಬಲಗಡೆ ತುಂಬುಹಸಿರು ನಮ್ಮ ಮನಸೂರೆಗೊಳ್ಳುತ್ತದೆ. ಈ ದಾರಿ ಕಾಲುವೆಯ ಏರಿಯೂ ಹೌದಾದ್ದರಿಂದ ಈ ಭಾಗಕ್ಕೆ ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ, ಈ ಬಲಗಡೆಯ ಜಮೀನುಗಳೆಲ್ಲಾ ತಗ್ಗಿಗೆ ಬರುತ್ತವೆ. ಇಲ್ಲಿ ಕಾಣುತ್ತಿರುವ ಕಾಲುದಾರಿ ಕೋಡಿಬಾಯಿಕಟ್ಟೆಗೆ ಸಾಗುವುದು. ಈ ಕೋಡಿಬಾಯಿಕಟ್ಟೆಯ ಕಾಲುದಾರಿ ಬಗ್ಗೆ, ಆದರ ಅಕ್ಕಪಕ್ಕ ಸಿಗುವ ದೃಶ್ಯಗಳ ಬಗ್ಗೆ " ವಿಪ್ರೇಕ್ಷ್ಯ "ದಲ್ಲಿ ವಿವರವಾದ ಚಿತ್ರಮಾಲಿಕೆಯನ್ನೇ ಹಿಂದೆ ಟಂಕಿಸಿರುವೆನು. ಇಲ್ಲಿ ಆ ಮಾರ್ಗದ ಒಂದು ಭಾಗವನ್ನು, ಅದೂ ದೂರದರ್ಶಿ ಲೆನ್ಸ್ ಗೆ ದಕ್ಕಿದ್ದನ್ನು ಪ್ರಸ್ತುತ ಪಡಿಸುತ್ತಿದ್ದೇನೆ. ನನಗೆ ಟೆಲಿಫೋಟೋ ಲೆನ್ಸ್ ಗಳ ಬಗ್ಗೆ ತೀವ್ರವಾದ ಆಸಕ್ತಿಯಿದೆ. ಒಂದಾನೊಂದು ದಿನ ಹೀಗೇ ಅತಿ ಪ್ರಾಥಮಿಕವಾದ EF-S 55-250 IS ಲೆನ್ಸನ್ನು ಒಯ್ದಿದ್ದೆ. ಏರಿನ ಮೇಲಿರುವ ದಾರಿಯಿಂದ ನೋಡುವಾಗ ಕೆಳಗೆ ಕಂಡ ನೋಟವೇ ಈ ಚಿತ್ರ. ಸುತ್ತಲಿನ ಹಸಿರಿನ ಮಧ್ಯೆ ಅಂಕುಡೊಂಕಾಗಿ ಸಾಗುವ ಕಿರುಗಾಲುವೆ, ಮತ್ತದರ ಸಾಂಗತ್ಯದಲ್ಲೇ ಸಾಗು...
Comments
Post a Comment