PRAYING BEFORE GOD....
ಸೂರ್ಯದೇವನ ಮುಂದೆ ಪ್ರಾರ್ಥನೆ...
ಅದೇ ಕೋಮಾಛಾಯಾ ಕಾರ್ಯಕ್ರಮದಂದೇ ಕಣ್ಣಿಗೆ ಬಿದ್ದ ಮತ್ತೊಂದು ದೃಶ್ಯವಿದು. ಸಾಮಾನ್ಯವಾಗಿ ಲಲಿತಮಹಲ್ ಆಸುಪಾಸಿನಲ್ಲಿ ಸುಂದರವಾದ ಸೂರ್ಯೋದಯ-ಸೂರ್ಯಾಸ್ತಗಳು ಕಣ್ಣುತುಂಬುತ್ತವೆ. ಈ ಸಲ ಹೀಗಾಯಿತು- ಕ್ಯಾಮೆರಾವನ್ನು ಹೊಂದಿಸಿಕೊಳ್ಳುತ್ತಿದ್ದ ನನ್ನ ಪಕ್ಕದಲ್ಲಿ ಒಬ್ಬರು ನಡೆದು ಹೋದರು, ಬಾಯಲ್ಲಿ ಏನೋ ಮಣಗುಟ್ಟುತ್ತಿದ್ದು, ಕೈಗಳಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ನಡೆದಿದ್ದರು. ನಾನು ನಿಂತಿದ್ದ ನೆಲೆಗಿಂತ ಸ್ವಲ್ಪ ಎತ್ತರವಾದ, ದಿಗಂತದಂಚು ಎನ್ನಬಹುದಾದ, ಪ್ರದೇಶವನ್ನು ಸೇರಿ ಸೂರ್ಯನೆಡೆಗೆ ಕೈ ಮುಗಿದು ನಿಂತು ಹಾಗೇ ಪ್ರಾರ್ಥಿಸುತ್ತಿದ್ದರು. ನಾನು ಬೇರೆ ಬೇರೆ ಸಂಯೋಜನೆಗಳನ್ನು ಮಾಡಿ ಕೊನೆಗೆ ಅವರನ್ನೂ ಸೇರಿಸಿಕೊಂಡು ಚಿತ್ರಿಸುವವರೆಗೂ ಅವರಲ್ಲೇ ನಿಂತಿದ್ದರು. ನಾನು ಬಳಸುತ್ತಿದ್ದುದು ದೂರದರ್ಶಿ ಮಸೂರವಾದ್ದರಿಂದ ಅವರಿಗೆ ತಾವೂ ಈ ಚಿತ್ರದ ಭಾಗವಾಗಿರುವುದು ತಿಳಿಯುವ ಸಾಧ್ಯತೆಯೇ ಇರಲಿಲ್ಲ.
ಈ ಚಿತ್ರದಲ್ಲಿ ಇರುವುದು ಮೂರೇ ಧಾತುಗಳು[Elements]. ಸೂರ್ಯ, ಮರ ಮತ್ತು ಮನುಷ್ಯ. ಬೆಳಗುತ್ತಿರುವ ಸೂರ್ಯನು ದೈವಶಕ್ತಿಯ ಸಂಕೇತವಾದರೆ, ತನ್ನ ವಿಸ್ತಾರವಾದ ಶಾಖೋಪಶಾಖೆಗಳಿಂದ ಕೂಡಿರುವ ಮರ- ಪ್ರಕೃತಿಯ ಸಂಕೇತ. ಮರದ ಟೊಂಗೆಗಳು ಪ್ರಾರ್ಥಿಸುತ್ತಿರುವ ಮನುಜನ ಕಡೆಗೆ ಚಾಚಿಕೊಂಡಿದ್ದು ಏನನ್ನೋ ಕೊಡಲುದ್ಯುಕ್ತವಾಗಿರುವಂತೆ ಭಾಸವಾಗುತ್ತವೆ. ಮನುಷ್ಯನ ಮನಮುಟ್ಟುವ ಪ್ರಾರ್ಥನೆಯನ್ನು ಲಾಲಿಸುವ ದೇವನು, ಪ್ರಕೃತಿಯ ಮುಖಾಂತರ ವೃಷ್ಟಿ-ತುಷ್ಟಿಗಳನ್ನು ಮಾಡಿ ಅವನನ್ನು ಪೊರೆಯುವನು ಎಂಬುದನ್ನು ಈ ಚಿತ್ರವು ಮಾರ್ಮಿಕವಾಗಿ ತೋರಿಸುತ್ತದೆ.

Comments
Post a Comment