THE SUNRISE BEHIND LALITHAMAHAL.
ಲಲಿತಮಹಲ್ ಗೋಪುರದ ಹಿಂದೆ ಸೂರ್ಯೋದಯ... ಕೆಲವು ದಿನಗಳ ಹಿಂದೆ ಕೊಮಾಛಾಯಾ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಸಿಕ್ಕ ದೃಶ್ಯಗಳಲ್ಲಿ ಒಂದು ಇಲ್ಲಿದೆ. ಲಲಿತಮಹಲ್ ಅರಮನೆಯ ಅಸುಪಾಸಿಗೆ ಹೋಗಿದ್ದರಿಂದ ಸೂರ್ಯೋದಯದ ದೃಶ್ಯಗಳು ನನ್ನ ಗುರಿಯಾಗಿದ್ದವು. ಆ ಲಲಿತಮಹಲ್ಲಿನ ಗೋಪುರದ ಹಿಂದೆ ಸೂರ್ಯಬಿಂಬವನ್ನು ಸಂಯೋಜಿಸಿಕೊಂಡರೆ ೨/೩ ನೀತಿಗೂ ಅನ್ವಯವಾಗುತ್ತದೆ ಎಂದೆನ್ನಿಸಿ, ಸೂಕ್ತ ಸ್ಥಳದಲ್ಲಿ ಅತ್ತಿತ್ತ ಅಡ್ಡಾಡಿ ಕೆಲವಾರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡೆ. ಅವುಗಳಲ್ಲಿ ಒಂದನ್ನು ಇಲ್ಲಿ ಹರವಿರುವೆ. ಸೂರ್ಯೋದಯದ ಚಿತ್ರಗಳು ಯಾರಿಗೆ ಇಷ್ಟವಲ್ಲ? ಆದರೆ ಇಲ್ಲಿ ನಾನು ಸ್ವಲ್ಪ ಚಿಂತನಾಪಥವನ್ನು ತಿರುಗಿಸಲು ಪ್ರಯತ್ನಿಸುತ್ತೇನೆ. ಸೂರ್ಯನು ನಮ್ಮೆಲ್ಲರಿಗೂ ಕಾಣುವ ಪ್ರತ್ಯಕ್ಷದೇವನೇ ಸರಿ. ಇಲ್ಲಿರುವ ಗೋಪುರವನ್ನು ಮನುಷ್ಯನ ಪ್ರತಿಷ್ಠೆಯ ಸಂಕೇತವೆಂದುಕೊಂಡರೆ, ಹಾಗೂ ಆ ಪ್ರತಿಷ್ಠೆಯ ಮೇಲ್ತುದಿಯಲ್ಲೊಂದು ಪುರುಷಾಹಂಕಾರವೆನ್ನುವ ಮರಿಗೋಪುರವಿದೆ ! ಆ ಗೋಪುರದ್ವಯದ ನಭಚುಂಬೀ ಪ್ರವೃತ್ತಿಯನ್ನು ಮೇಲಿರುವ ದೇವನು ಚೋದ್ಯದಿಂದ-ಪರಿಹಾಸದಿಂದ ನೋಡುತ್ತಿರುವನು. ನೆಲಮಟ್ಟದಿಂದ - ಎಂದರೆ ಏನೇನೂ ಅರಿಯದ, ತಲೆ-ಬಟ್ಟಲು ಖಾಲಿಯಿರುವ ಜನರ ದೃಷ್ಟಿಯಿಂದ ಈ ನರನಿರ್ಮಿ...