DAY-LIGHT?
ಹಗಲುದೀಪ?
ನಿಜ, ಇದು ಹಗಲುದೀಪವೇ. ರಾತ್ರಿಕಾಲದಲ್ಲಿ ಚಿತ್ರಿಸಿದ್ದಲ್ಲ, ಪರಂತು- ಮಟಮಟಮಧ್ಯಾಹ್ನದಲ್ಲಿ ಸೆರೆಹಿಡಿದದ್ದು. ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಸಮಯಾವಕಾಶವಿನ್ನೂ ಇತ್ತಾಗಿ ಕ್ಯಾಮರಾ ನೆನಪಾಯಿತು. ಹೋಗಿದ್ದು ಬೇರೆ ಕಡೆಗೇ ಆದರೂ ಮಾರ್ಗಮಧ್ಯೆ ರಸ್ತೆಗಳ ಕೂಡೊಂದರಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆಗಾಗಿ ನಿಲ್ಲಿಸಬೇಕಾಗಿ ಬಂತು. ಸುಮ್ಮನೆ ಹಾಗೇ ಅತ್ತಿತ್ತ ನೋಡುತ್ತಿದ್ದವನಿಗೆ ಕಂಡದ್ದೇ ಈ ದೀಪದಕಂಬ. ಆ ಕಡೆ ವಾಹನಸಂಚಾರಕ್ಕೆ ತೆರವಾದರೂ ಗಮನಿಸದೇ ನನ್ನ ವಾಹನವನ್ನು ರಸ್ತೆಬದಿಗೆ ಹಾಕಿ, ಓಡಿದೆ. ನಡುಮಧ್ಯಾಹ್ನವಾದ್ದರಿಂದ ನೆತ್ತಿಯಮೇಲೇ ಸೂರ್ಯ! ತಲೆಯೆತ್ತಲಾಗದ ಪ್ರಖರತೆ! ಕ್ಯಾಮರಾ ಬಳಸುವ ಚಾಪಲ್ಯ ಅದನ್ನೂ ಮೀರಿದ್ದು! ಹಾಗಾಗಿ ಆ ಕಂಬವನ್ನು ಇಲ್ಲಿ ಹಿಂದೀಪ್ತವಾಗುವಂತೆ [silhoutte] ಮಾಡಿದೆ.
ನಿಮೇಷವೇಗವನ್ನು ಸಾವಿರಗಳಲ್ಲಿ ತಂದಿಟ್ಟು, ಇಲ್ಲಿ ಕಂಬದ ತುದಿಯಲ್ಲಿರುವ ದೀಪದ ಆವರಣಕ್ಕಾಗಿ ಮಾಡಿರುವ ಗಾಜಿನ ಬುರುಡೆಯನ್ನು ನೇರವಾಗಿ ಸೂರ್ಯನ ಬಿಂಬಕ್ಕೆ ಅಡ್ಡವಾಗಿ - ದೃಷ್ಟಿಪಥಕ್ಕೆ ಸರಿಯಾಗಿ ಹಿಡಿದು ಕ್ಲಿಕ್ಕಿಸಿದ ಚಿತ್ರವಿದು.
ಡಿಎಸ್ಎಲ್ಆರ್ ಒಂದು ಕೈಯಲ್ಲಿದ್ದರೆ, ಇಂಥವೆಲ್ಲಾ ಅಕಿಂಚಿತ್ಕರವಲ್ಲವೇ? [ನಿಜವೇ, ವಿದ್ಯಾಜ್ಞಾನವಿದ್ದಲ್ಲಿ ಮಾತ್ರ. ]

Comments
Post a Comment