KODIBAYI KATTE AREA.

ಕಾಲುವೆ-ಕಾಲುದಾರಿ. 



        ಕೆ. ಆರ್. ಎಸ್ ಪರಿಸರದಲ್ಲಿನ ವಿಶ್ವೇಶ್ವರಯ್ಯ ಕಾಲುವೆಯ ಪಕ್ಕದ ದಾರಿಯಲ್ಲೇ  ಸಾಗಿದರೆ, ಬಲಗಡೆ ತುಂಬುಹಸಿರು ನಮ್ಮ ಮನಸೂರೆಗೊಳ್ಳುತ್ತದೆ.  ಈ ದಾರಿ ಕಾಲುವೆಯ ಏರಿಯೂ ಹೌದಾದ್ದರಿಂದ  ಈ ಭಾಗಕ್ಕೆ  ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ, ಈ ಬಲಗಡೆಯ ಜಮೀನುಗಳೆಲ್ಲಾ ತಗ್ಗಿಗೆ ಬರುತ್ತವೆ. ಇಲ್ಲಿ ಕಾಣುತ್ತಿರುವ  ಕಾಲುದಾರಿ  ಕೋಡಿಬಾಯಿಕಟ್ಟೆಗೆ ಸಾಗುವುದು.  ಈ ಕೋಡಿಬಾಯಿಕಟ್ಟೆಯ ಕಾಲುದಾರಿ ಬಗ್ಗೆ, ಆದರ  ಅಕ್ಕಪಕ್ಕ ಸಿಗುವ ದೃಶ್ಯಗಳ ಬಗ್ಗೆ "ವಿಪ್ರೇಕ್ಷ್ಯ"ದಲ್ಲಿ ವಿವರವಾದ ಚಿತ್ರಮಾಲಿಕೆಯನ್ನೇ  ಹಿಂದೆ ಟಂಕಿಸಿರುವೆನು.  ಇಲ್ಲಿ  ಆ ಮಾರ್ಗದ ಒಂದು ಭಾಗವನ್ನು, ಅದೂ ದೂರದರ್ಶಿ ಲೆನ್ಸ್ ಗೆ  ದಕ್ಕಿದ್ದನ್ನು  ಪ್ರಸ್ತುತ ಪಡಿಸುತ್ತಿದ್ದೇನೆ. 


        ನನಗೆ ಟೆಲಿಫೋಟೋ ಲೆನ್ಸ್ ಗಳ  ಬಗ್ಗೆ  ತೀವ್ರವಾದ ಆಸಕ್ತಿಯಿದೆ.  ಒಂದಾನೊಂದು ದಿನ ಹೀಗೇ  ಅತಿ ಪ್ರಾಥಮಿಕವಾದ EF-S 55-250 IS ಲೆನ್ಸನ್ನು ಒಯ್ದಿದ್ದೆ. ಏರಿನ ಮೇಲಿರುವ ದಾರಿಯಿಂದ ನೋಡುವಾಗ  ಕೆಳಗೆ ಕಂಡ ನೋಟವೇ  ಈ ಚಿತ್ರ.  ಸುತ್ತಲಿನ ಹಸಿರಿನ ಮಧ್ಯೆ  ಅಂಕುಡೊಂಕಾಗಿ ಸಾಗುವ  ಕಿರುಗಾಲುವೆ, ಮತ್ತದರ ಸಾಂಗತ್ಯದಲ್ಲೇ ಸಾಗುವ ಕಾಲುದಾರಿ ಅದಕ್ಕೊಂದು ಪುಟ್ಟ ಸೇತುವೆ ಇವೆಲ್ಲಾ ವಿಶಿಷ್ಟವಾದ ಜೀವಂತಿಕೆಯನ್ನುಂಟುಮಾಡುತ್ತವೆ. ಬದುಕು ಪೂರಾ ಹಲವಾರು ಏರಿಳಿತ-ತಿರುವುಗಳನ್ನು ಕಂಡ, ಸಮೃದ್ಧ ದಾಂಪತ್ಯಜೀವನ ನಡೆಸಿದ ಸಾರ್ಥಕ ಭಾವದಿಂದಿರುವ ಹಿರಿಯ ದಂಪತಿಗಳನ್ನು -  ಅವರ ತುಂಬು ಬದುಕನ್ನೂ  ಈ ದೃಶ್ಯ ಪ್ರತಿನಿಧಿಸುತ್ತದೆ.   ಹಿನ್ನೆಲೆಯಲ್ಲಿ  ದೂರದಲ್ಲಿ ಚಾಮುಂಡಿಬೆಟ್ಟ ದೈವಸಾಕ್ಷಿಯೋ ಎಂಬಂತಿದೆ. 

Comments

Popular posts from this blog

PRAYING BEFORE GOD....

END FOR THE DAY'S WORK....