THE TEA SELLER.
ಚಹಾ ಮಾರುವ ಹುಡುಗ... ನಸುಕಿನಲ್ಲ್ಲಿನಗರದ ಹೃದಯಭಾಗದಲ್ಲಿ ಕಾರ್ಯನಿಮಿತ್ತವಾಗಿ ಸಾಗುತ್ತಿದ್ದ ನನಗೆ ಟ್ರಾಫಿಕ್ ನಿಲುಗಡೆಯೊಂದರಲ್ಲಿ ರಸ್ತೆ ದಾಟುತ್ತಿದ್ದ ಈ ಚಹಾ ಮಾರುವ ಹುಡುಗ ಕಂಡನು. ಅಲ್ಲಲ್ಲಿ ತನಗೆದುರು ಕಂಡ ಜನರನ್ನು ಬಿಡದೆ ಚಹಾ ಬೇಕೇ ಎಂದು ವಿಚಾರಿಸುತ್ತಾ ತನ್ನ ವ್ಯವಹಾರವನ್ನು ನಡೆಸಿದ್ದನವನು. ತಟ್ಟನೆ ಏನೋ ಹೊಳೆದಂತಾಗಿ ನನ್ನ ವಾಹನವನ್ನು ನಿಲ್ಲಿಸಿ, ಅವನು ರಸ್ತೆ ದಾಟುವುದರೊಳಗಾಗಿ ನನಗೆ ಸರಿಕಂಡ ಆಯಕಟ್ಟಿನ ಸ್ಥಳದಲ್ಲಿ ಬಂದು ನಿಂತು ಕಾದೆ. ಅಷ್ಟುಹೊತ್ತಿಗಾಗಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಕಾರ್ಯಾರಂಭಿಸಿತ್ತು. ಅವನು ರಸ್ತೆ ದಾಟುವುದಕ್ಕೂ ಹಿಂದೆ ಬರುತ್ತಿದ್ದ ವಾಹನಗಳು ನಿಲ್ಲುವುದಕ್ಕೂ ಸರಿಹೋಯಿತು. ಕೈಲಿದ್ದ ಕ್ಯಾಮರಾ ಹಲವು ಸಲ ಕ್ಲಿಕ್ಕಿಸಿತು. ಅದರ ಫಲಿತವು ಇಲ್ಲಿದೆ. ಮೊದಲನೆಯದಾಗಿ, ಆ ಹುಡುಗನ ಜೀವನಶ್ರದ್ಧೆ ಇಷ್ಟವಾಯಿತು. ಮುಂಜಾವಿನ ಚಳಿಗೆ ಲೆಕ್ಕಿಸದೆ ಹೊಟ್ಟೆಪಾಡಿನ ಬಗ್ಗೆ ಗಮನವಿಟ್ಟದ್ದು ಧನಾತ್ಮಕವೆನ್ನಿಸಿತು. ಎರಡನೆಯದಾಗಿ, ಹಿನ್ನೆಲೆಯಲ್ಲಿ ಸಾಲುಗಟ್ಟಿರುವ ವಾಹನಗಳು- ಮುಂಚೂಣಿಯಲ್ಲಿರುವ ಮೂರರಲ್ಲಿ ಎರಡು ಸರಕುಸಾಗಣೆ ಮಾಡುವ ವಾಣಿಜ್ಯವಾಹನಗಳು, ಆಗಲೇ ತಮ್ಮ ವಹಿವಾಟು ಪ್ರ...