MAYFLOWER BLOOMS..
ಕೆಂಪಿನ ಕಲರವ. .
ಚಾಮರಾಜನಗರದ ಆಚೆ ಸುವರ್ಣಾವತಿ ಜಲಾಶಯವಿರುವುದಷ್ಟೇ? ವಸಂತ-ಗ್ರೀಷ್ಮಗಳ ಕಾಲದಲ್ಲಿ ಒಂದಾನೊಮ್ಮೆ ಅತ್ತ ಎಡತಾಕಿದ್ದಾಗ ಅಲ್ಲಿ ಕಂಡ ದೃಶ್ಯವಿದು. ಬೇಸಿಗೆಯಲ್ಲಿ ಜಲಾಶಯದ ಬಳಿ ಏನೂ ಕೆಲಸವಿಲ್ಲವಾದರೂ ಆ ಮಾರ್ಗದ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಅಕ್ಕಪಕ್ಕದಲ್ಲಿ ಬೆಳೆದಿರುವ ಗುಲ್ಮೊಹರ್ ಮರಗಳ ಸೊಗಸು, ನನ್ನನ್ನು ವಶೀಕರಿಸುತ್ತದೆ.
ಜಲಾಶಯದ ಮುಂದೆ ಮಣ್ಣುರಸ್ತೆಯಿದೆ. ಹೊರಹರಿವಿನ ಕಾಲುವೆಯನ್ನು ದಾಟಿ ಮತ್ತೊಂದು ತುದಿಯನ್ನು ಸೇರಿಸುವ ರಸ್ತೆಯದು. ಅಲ್ಲಿ ಈ ಮರ ನನ್ನ ಕ್ಯಾಮೆರಾಕ್ಕೆ ಸೆರೆಯಾಯಿತು. ಇಡೀ ಚಿತ್ರದಲ್ಲಿ ಚಿಗುರಿದ ಹಸಿರು ಪ್ರಧಾನವಾಗಿದೆ. ಎಡಮೇಲ್ಭಾಗದಲ್ಲಿ ಸ್ವಲ್ಪ ಮೋಡಗಳ ಜಮಾವಣೆಯಿದೆ. ಪ್ರಾಥಮಿಕವರ್ಣಗಳೆನ್ನಿಸುವ ಹಸಿರು ಮತ್ತು ನೀಲಿಯಿದ್ದ ಮೇಲೆ ಕೆಂಪಿಲ್ಲದಿದ್ದರೆ ಸೊಗಸೆನ್ನಿಸೀತೆ? ಇಡೀ ಚೌಕಟ್ಟಿಗೆ ಎಡದಿಂದ ಆವರಣವೆನ್ನಿಸುವಂತೆ ಕಾಣುವ ಈ ಗುಲ್ಮೊಹರ್ ಮರವೇ ವಿಜೃಂಭಿಸಿ, ಕಾಣಿಸುತ್ತದೆ.

Comments
Post a Comment