BRIDGE AT HANASOGE.

ಮೂರು ಪಾತಳಿಗಳ ಮೇಲಾಟ... 


      ಕೃಷ್ಣರಾಜನಗರದಿಂದ ಚುಂಚನಕಟ್ಟೆ ಮಾರ್ಗವಾಗಿ ಕಾವೇರೀನದಿಯ ದಕ್ಷಿಣತೀರದಲ್ಲೇ ಸಾಗಿದರೆ ಹನಸೋಗೆ ಎಂಬ ಗ್ರಾಮ ಸಿಗುತ್ತದೆ. "ಏಕಾಂತದೇಶೇ ಸರಿತೋಸಮೀಪೇ " ಎಂಬಂತೆ ಪ್ರಶಾಂತವಾದ ಸ್ಥಳವದು.  ಅಲ್ಲಿ ಇತ್ತೀಚೆಗೆ  ಹೊಸದಾಗಿ ಸೇತುವೆಯೊಂದನ್ನು ನಿರ್ಮಿಸಿದ್ದಾರೆ![ಅದರ ಹಿಂದಕ್ಕೂ-ಮುಂದಕ್ಕೂ ಇನ್ನೂ ರಸ್ತೆಯನ್ನೇ ನಿರ್ಮಿಸಿಲ್ಲವಾದರೂ ಸರಿ!!]  ನದೀತೀರಗಳ ಬಗ್ಗೆ ತೀರದ ಚಾಪಲ್ಯವನ್ನು ಹೊಂದಿರುವ ನನಗೆ  ಈ ಪರಿಸರ ಅಪ್ಯಾಯಮಾನವೆನ್ನಿಸಿತು. ಅಲ್ಲಿ  ಹಾಗೇ  ಅಡ್ಡಾಡುತ್ತಿದ್ದ ನನಗೆ ಈ ಒಣಗಿನಿಂತ ಮರದ ಹಿನ್ನೆಲೆಯಿಂದ ಸಿಗುವ ದೃಶ್ಯಸಾಧ್ಯತೆ ಸ್ವಾರಸ್ಯವೆನ್ನಿಸಿತು. ಸಂಗ್ರಹಕ್ಕೆ ಸೇರಿಸಿಕೊಂಡೆ. 

        ಈ ಚಿತ್ರದಲ್ಲಿ ಪ್ರಧಾನವಾದ ವಸ್ತುವೆಂದರೆ ಆ ಒಣಗಿ ನಿಂತ ಮರವೇ. ಅದರ ನಿಲುವು  ಉದ್ದುದ್ದ[ಎತ್ತರ],  ಹಾಗಾಗಿ ಉದ್ದ ಮಾದರಿಯ ಚೌಕಟ್ಟನ್ನೇ   ಆಯ್ದುಕೊಂಡೆ.  ಹರಿಯುತ್ತಿರುವ ನೀರು ಮತ್ತು ಮೇಲೆ ಕಟ್ಟಿರುವ ಸೇತುವೆ ಇವು, ಪರಸ್ಪರ ಲಂಬವಾಗಿದ್ದು, ಎರಡು ಪ್ರತ್ಯೇಕ ಪಾತಳಿಗಳನ್ನು ಉಂಟುಮಾಡುತ್ತಿವೆ.  ಮೊದಲು ಹೇಳಿದ ಮರವಾದರೋ ನಿಲುವು ಉದ್ದವಾದರೂ ವೀಕ್ಷಕರಿಗಭಿಮುಖವಾದ ಮೂರನೇ ಪಾತಳಿಯನ್ನು ಆಗಮಾಡಿಸಿವೆ.  ಹಾಗೇ ವಸ್ತುವಿಭಿನ್ನತೆಯಿಂದಲೂ  ಇಲ್ಲಿ ಮೂರು ಮಾದರಿಯಿವೆ:-    ದಡದ ಮರದ ಗಾಢತೆ, ನೀರಿನ ತಿಳಿಬಣ್ಣ ಹಾಗೂ ಆಕಾಶದ ಪ್ರಬಲ ನೀಲಿ.  ಹಲವಾರು ಸಂಯೋಜನೆಗಳನ್ನು ಚಿತ್ರಿಸಿದರೂ  ಮುಗಿಯದ ಜಿಜ್ಞಾಸೆ!  ಕಷ್ಟಪಟ್ಟು ಒಂದನ್ನು ಇಲ್ಲಿ ಕಾಣಿಸಿದ್ದೇನೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....