COWHERD WOMAN.

        ಹೊರೆ ಹೊತ್ತ ಮಹಿಳೆ... 


       ವಿಶ್ವೇಶ್ವರಯ್ಯ ನಾಲೆಯ ಪಕ್ಕದಲ್ಲೇ ಸಾಗುವ ದಾರಿಯಲ್ಲಿ  ಒಂದಾನೊಂದು ಸಂಜೆ ಕಂಡ ದೃಶ್ಯವಿದು. ತನ್ನ ಹಸು-ಕರುಗಳನ್ನು  ಅಟ್ಟಿಕೊಂಡು ಮನೆಕಡೆಗೆ ತೆರಳುತ್ತಿದ್ದ ಆ ಮಹಿಳೆಯ ಚಿತ್ರ, ಹಿಂದೀಪ್ತವಾಗಿದ್ದುದರಿಂದ[Backlit] ಸ್ವರಸವೆನ್ನಿಸಿತು,  ಕ್ಯಾಮೆರಾದ ಸ್ಮೃತಿಕೋಶ ಸೇರಿತು. 

        ಈ ಚಿತ್ರವು  ಕಪ್ಪು-ಬಿಳುಪಿನಲ್ಲಿರಬಹುದಾಗಿತ್ತು ಎನ್ನುವ ವೀಕ್ಷಕರಿಗೆ  ನನ್ನ ಸಣ್ಣದೊಂದು ಸ್ಪಷ್ಟನೆ: ಹಾಗೆ ಮಾಡಿದ್ದರೆ  ಚಿತ್ರದಲ್ಲಿರುವ ಸಂಜೆಯ ಹಳದೀ ಬಣ್ಣದ 
ಬೆಳಕು ಕೈ ತಪ್ಪಿಹೋಗುತ್ತಿತ್ತು. ಕೇವಲ ನೆರಳು-ಬೆಳಕಿನಾಟ ಮಾತ್ರವೇ ವಸ್ತುವಾಗಿರುತ್ತಿತ್ತು.  ನನ್ನ ಆಶಯವಿರುವುದೇ  ಸಂಜೆಯ ಈ ಹಳದೀ ಬಣ್ಣ, ಹಲವಾರು ಸ್ತರಗಳಲ್ಲಿ  ಪಡಿಮೂಡುವುದನ್ನು  ಹೇಳಲು.   
       ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಈ ಸಮಯಕ್ಕೆಂದೇ ಅನ್ವರ್ಥವಾದ ರಾಗವೊಂದಿದೆ- 'ದೇಶ್ಯ'ವೆಂದು. ಈ ರಾಗದಲ್ಲಿ ಹಲವಾರು ಜನಪ್ರಿಯ ಗೀತೆಗಳನ್ನೂ ವಾಚಕರು ಕೇಳಿರಬಹುದು.  'ಮ-ಗ-ರೀ-ಮ-ಪ/ ಮ-ಪ-ನೀ-ನಿ-ಸಾ//' ಎಂಬಿತ್ಯಾದಿಯಾಗಿ  ಹೊರಳುವ ಆ ರಾಗದ ಸಂಚಾರವನ್ನು ಅನುಭವಿಸುವುದೇ ಸೊಗಸು. ಈ ಚಿತ್ರದಲ್ಲಿನ ಸಂಜೆಯ ಹಳದಿಯು ಗ್ರಾಮೀಣ ಪರಿಸರವು ಸೇರಿ ಇದೇ  ರಾಗವನ್ನು ಮೂರ್ತೀಭವಿಸಿ ಆನಂದಸಾಗರಕ್ಕೆ ನನ್ನನ್ನು  ತಳ್ಳಿತು.  ಅದೇ ಗುಂಗನ್ನು ಉಳಿಸಿಕೊಳ್ಳುವ ಚಪಲದಿಂದ  ಈ ದೃಶ್ಯವನ್ನು ವರ್ಣಚಿತ್ರವಾಗೇ ಸಂಗ್ರಹಿಸಿಕೊಂಡೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....