SIXTEEN PILLARED MANTAPAM AT NANJANAGOODU
ಹದಿನಾರು ಕಂಭಗಳ ಮಂಟಪ.
ನಂಜನಗೂಡಿನಲ್ಲಿ ಕಪಿಲಾ ನದಿಯೊಳಗೆ ಹದಿನಾರು ಕಂಭಗಳ ಮಂಟಪವೊಂದಿತ್ತು. ಪುರಾತನವಾದದ್ದು, ಆದರೆ ಈಗ ನೀರಿನ ಅಥವಾ ಕಾಲನ ಹೊಡೆತಕ್ಕೆ ಸಿಕ್ಕೋ ಏನೋ- ಎಲ್ಲಾ ಕಂಭಗಳೂ ಕುಸಿದು ಹೋಗಿ, ಈ ಸ್ಥಳ ಖಾಲಿಯಾಗಿದೆ. ಎಂದರೆ ಮಂಟಪ ಇತ್ತೆಂಬ ಯಾವ ಕುರುಹೂ ಕಾಣಬರುವುದಿಲ್ಲ. ಸಿಕ್ಕದ್ದೇ ಮತ್ತು ಸಿಕ್ಕಷ್ಟೇ ಅದೃಷ್ಟವೆಂದು ಭಾವಿಸಿ ಈ ಚಿತ್ರವನ್ನು ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆನು. ಡಿಜಿಟಲ್ ಛಾಯಾಗ್ರಹಣದ ಪೂರ್ವಪರ್ವದ ಫಿಲ್ಮ್ ಬಳಕೆಯ ದಿನಗಳಲ್ಲಿ ಈ ಮಂಟಪವನ್ನು ಚಿತ್ರಿಸಿದ್ದೇ ಚಿತ್ರಿಸಿದ್ದು. ಆಗ ಇದು ಅಖಂಡವಾಗಿ, ಅಕ್ಷತವಾಗಿತ್ತು.
ಕೇವಲ ದಶಕವೊಂದರ ಹಿಂದೆಯೂ ಸುಸ್ಥಿತಿಯಲ್ಲಿದ್ದ, ಭಾರಿ ಕಲ್ಲುಗಳ ರಚನೆಯೊಂದು ಈಗ ಇಲ್ಲವೇ ಇಲ್ಲವೆಂದರೆ ಅದು ಅದು ಇತ್ತೀಚಿಗೆ ಉಂಟಾಗುತ್ತಿರುವ ನದಿನೀರಿನ ಪ್ರವಾಹದ ಪರಿಣಾಮವಲ್ಲದೆ ಮನುಷ್ಯಕೃತವೆನ್ನಲಾದೀತೇ? ಶಾಂತಂ ಪಾಪಂ!
ಪ್ರಸ್ತುತ: ತಾ//8.2.17. ನಿನ್ನೆ ನಂಜನಗೂಡಿಗೆ ಹೋಗಿದ್ದಾಗ ಕಣ್ಣಿಗೆ ಕಂಡದ್ದು- ಆ ಮಂಟಪವು ಪುನರುಜ್ಜೀವನಗೊಂಡು ನಿಂತಿದೆ!! ಆಡಳಿತಯಂತ್ರ ಅಂತೂ ಎಚ್ಚರಗೊಂಡಿದೆ! ಸದ್ಯ!

Comments
Post a Comment