COL. BAILEY'S DUNGEON.

ನೆರಳು  ಬೆಳಕಿನ ಚಿತ್ತಾರ-


      ಶ್ರೀರಂಗಪಟ್ಟಣದ ಕರ್ನಲ್ ಬೈಲಿ ನೆಲಮಾಳಿಗೆ ಸೆರೆಮನೆಯಲ್ಲಿ ಹಲವಾರು ಛಾಯಾಗ್ರಹಣದ ಅವಕಾಶವಿರುತ್ತದೆ. ಇದೊಂದು ಸರಳವಾದ ಸಂಯೋಜನೆಯಷ್ಟೇ. 
        
       ಇಲ್ಲಿ ಅತಿ ಪ್ರಖರವಾದ ಬೆಳಕಿನ ರಾಚುವಿಕೆ ಇದೆ - ಹಾಗೇ ಗಾಢವಾದ ನೆರಳಿನ ಆವರಣವೂ ಇದೆ.   ನಡುವೆಲ್ಲಾ  ಬೆಳಕಿನಿಂದ ಕತ್ತಲಿನೆಡೆಗೆ  ಹಲವಾರು ಛಾಯಾ ವೈವಿಧ್ಯಗಳು.  ಕಂಭಗಳ ಮೇಲೆ ಮೂಡಿರುವ ಪ್ರಖರವಾದ ಬೆಳಕಿನ ಪಟ್ಟಿಗಳ ಧಾರ್ಷ್ಟ್ಯಕ್ಕೆ  ಸುತ್ತ ಕಮಾನುಗಳ ಆಕೃತಿಯಲ್ಲೂ, ಹಾಗೇ  ನೆಲದ  ಚಪ್ಪಟೆಯ ಪಾತಳಿಯಲ್ಲೂ  ಕಂಡುಬರುವ ನೆರಳು ಅಥವಾ ಕತ್ತಲೆಯ ಗಾಢತೆಯು  ಆವರಿಸಿಕೊಂಡು ಸಮಾಧಾನಿಸುತ್ತಿರುವಂತಿದೆ.  ಇದು ನಮ್ಮ ಮಣ್ಣಿನ ಗುಣವಲ್ಲವೇ ? ಶತಮಾನಗಳ ಕಾಲ ಪರಕೀಯರ ಆಕ್ರಮಣಕ್ಕೆ  ತುತ್ತಾದರೂ ಅವೆಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ನಮ್ಮತನವನ್ನು ಬಿಟ್ಟುಕೊಡದೇ  ಉಳಿದುಬಂದವರು ನಾವು.  ಈ ಚಿತ್ರದಲ್ಲಿನ ಸಾಲುಕಂಭಗಳಲ್ಲಿ ಕೆಳಮುಖವಾಗಿ ಚೂಪುಚೂಪಾಗಿ  ಮೂಡಿರುವ  ಬೆಳಕಿನ ಪಟ್ಟೆಗಳು ಅಲ್ಲಿ  ಆಳಿದ,  ನಮ್ಮನ್ನು ಅಳಿಸಿದ ಯವನಾಧಮನ  ದಮನಕಾರಿ ಕ್ರೌರ್ಯವನ್ನೂ,  ನೆಲದ ಹಾಗೂ ಕಮಾನುಗಳ  ನೆರಳಿನಾವರಣವು  ನಮ್ಮ ಸಹನೆಯನ್ನೂ  ಬಿಂಬಿಸುತ್ತವೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....