WATER TANK NEAR BANAKAL PETE.
ಮರದಮೇಲಿನ ನೀರಿನತೊಟ್ಟಿ.
ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುವ ದಾರಿಯಲ್ಲಿ ಬಣಕಲ್ ಪೇಟೆಗೆ ಮುನ್ನ ರಸ್ತೆಯ ತಿರುವೊಂದರಲ್ಲಿ ಸಿಗುವ ಉಪಹಾರಗೃಹದ ಭಾಗಶಃ ಚಿತ್ರವಿದು. ಅವರು ಛಾವಣಿ ಮೇಲಿರಿಸುವ ನೀರಿನ ತೊಟ್ಟಿಯನ್ನು ಹಿತ್ತಲಿನ ಮರವೊಂದರ ಮೇಲೆ ಸ್ಥಾಪಿಸಿರುವ ಚಾತುರ್ಯವನ್ನು ನೋಡಿ ಮೆಚ್ಚಿಗೆಯಾಯಿತು, ಕ್ಲಿಕ್ಕಿಸಿ ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆ.
ಜೀವಂತವಾಗಿರುವ ಮರವಾದ್ದರಿಂದ ಭದ್ರವಾಗಿ ಬೇರೂರಿದೆ. ಅಷ್ಟು ಭಾರವನ್ನು ಖಂಡಿತಾ ತಾಳಿಕೊಳ್ಳುತ್ತದೆ. ಹೀಗೆ ಪರಿಸರದೊಂದಿಗೆ ಬೆರೆತು ಮಾಡಿಕೊಳ್ಳುವ ಅನುಕೂಲಗಳ ಪರಿಕಲ್ಪನೆಯೇ ಆಹ್ಲಾದಕರ!!

Comments
Post a Comment