POOKOT LAKE.
ಪೂಕೋಟ್ ಕೆರೆ, ವಯನಾಡು.
ಕೇರಳದ ವಯನಾಡಿನ ವೈತ್ತಿರಿ ಯಲ್ಲಿ ಪೂಕೋಟ್ ಎಂಬ ಕೆರೆಯೊಂದಿದೆ. ಊಟಿಯ ಸರೋವರಕ್ಕಿಂತ ಸ್ವಲ್ಪ ಚಿಕ್ಕದಾದ ಆದರೆ ತುಂಬಾ ಪ್ರಶಾಂತವಾದ, ಅಷ್ಟು ಜನಸಮ್ಮರ್ದವಿಲ್ಲದ ಸುಂದರ ಜಲಾಕರವದು. ಛಾಯಾಗ್ರಹಣವ್ಯಸನಿಗಳಿಗೆ. ಅತಿ ಪುಷ್ಕಳವಾದ ಗ್ರಾಸ ಇಲ್ಲಿಹುದು.
ಹಿಂದೆಲ್ಲಾ ಸರೋವರವೆಂದರೆ ಹಂಸಗಳು ತೇಲುತ್ತಿರುವತೆ ನಮ್ಮ ಕಲ್ಪನೆಯಿತ್ತು. ಈಗ ಹಾಗಿಲ್ಲ. ನಮಗೆ ಸಿಗುವಷ್ಟರಲ್ಲೇ ಹಂಸವೋ ಚಕ್ರವಾಕವೂ ಕಂಡುಕೊಳ್ಳಬೇಕು, ಕಲ್ಪಿಸಿಕೊಳ್ಳಬೇಕು. ಇಲ್ಲೂ ಹಾಗೆಯೇ. ಇಡೀ ಪರಿಸರದಲ್ಲಿ ನೀಲಿ ಮತ್ತು ಹಸಿರಿನ ಸ್ವಯಿರವಿಹಾರ. ಮಧ್ಯೆ ನಮ್ಮ ದೃಷ್ಟಿಯನ್ನು ನೇರವಾಗಿ ಕೀಲಿಸಿಕೊಳ್ಳುವ ಮಣ್ಣಿನ ಕಾಲುಹಾದಿ. ಬಲಗಡೆ ದೋಣಿಗಳ ನಿಲ್ದಾಣ. ನಿಶ್ಚಲ ಜಲರಾಶಿ. ಅದರಲ್ಲಿ ಪ್ರತಿಬಿಂಬ. ಈ ಎಲ್ಲದರ ನಡುವೆ ಎಡಗಡೆ ಏರ್ಪಡುವ ಅವಕಾಶದಲ್ಲಿ ಬೆಳ್ಳಗಿನ ದೋಣಿಗಳು. ನಮ್ಮ ಕಣ್ಣನ್ನು ಹಿಡಿದಿಟ್ಟುಕೊಳ್ಳುವ ಮುಖ್ಯ ಧಾತುವೆಂದರೆ ಅದೇ.

Comments
Post a Comment