ON THE WAY TO THE TOP...

   ಚಾಮುಂಡಿಬೆಟ್ಟದ ದಾರಿ... 



          ಚಾಮುಂಡಿಬೆಟ್ಟದ ಮೇಲಕ್ಕೆ ಹೋಗುವ ರಸ್ತೆ. ಬೆಟ್ಟದ ಮೇಲಿನಿಂದ ಇಳಿದುಬರುತ್ತಿದ್ದ ನನಗೆ ಕಂಡ ದೃಶ್ಯವಿದು. 

          ಬಸ್ಸೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಧಾತುಗಳೂ ಸರಿಸುಮಾರು ಒಂದೇ ಜಾತಿಯ ವರ್ಣಪ್ರವರ್ಗದಲ್ಲಿದೆ.  ಹಾಗಾಗಿ  ಇಡೀ ವಾತಾವರಣಕ್ಕೆ  ಚಕಿತಗೊಳಿಸುವ ವಿಷಮವರ್ಣದ ವಸ್ತುವೊಂದನ್ನು ಹುಡುಕುತ್ತಿದ್ದೆ.  ಕೆಂಪು ವೋಲ್ವೋ ಬಸ್ಸಿನ ರೂಪದಲ್ಲಿ ಅದು ಸಾಕಾರವಾಯಿತು.  ಹಸಿರು, ಗಾಢನೀಲಿ ಬಣ್ಣಗಳ ಮೇಲಾಟದಲ್ಲಿ ಸತ್ವ ಕಳೆದುಕೊಂಡು ಮೂಲೆಗುಂಪಾಗಿದ್ದ ಕೆಂಪಿನ ಜಾತಿಯ ವರ್ಣಪ್ರವರ್ಗಕ್ಕೆ [ನೆಲದ ಮಣ್ಣಬಣ್ಣ ಪ್ರಬಲವಾಗಿಲ್ಲ!] ಚೈತನ್ಯವೀಯಲೋ ಎಂಬಂತೆ ನುಗ್ಗಿ ಬರುತ್ತಿರುವ ಬಸ್ಸಿನರೂಪದಲ್ಲಿ  ಕೆಂಪು ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿದೆ. ಕೆಂಪು ಆಕ್ರಮಣಕಾರಿ ವ್ಯಕ್ತಿತ್ವದ ಸಂಕೇತವೂ ಹೌದು.  


          ನಾಡ ಸ್ವಾತಂತ್ರ್ಯಸಂಗ್ರಾಮದಲ್ಲಿ ಹಲವು ನಾಯಕರು ತಮ್ಮ ತತ್ವಸಿದ್ಧಾಂತಗಳಲ್ಲಿ ಇಟ್ಟುಕೊಳ್ಳದ, ಆದರೆ ಅನಿವಾರ್ಯವಾಗಿದ್ದ ಕ್ಷಾತ್ರರಣತೇಜದ ಕುರುಹು ಆಗ ಸಂದಿಗ್ಧಕಾಲದಲ್ಲಿ ಮೂಡಿಬಂದ  ಒಬ್ಬರೇ ಒಬ್ಬ ನಾಯಕರ ರೂಪದಲ್ಲಿ  ಸಾಕಾರವಾಯಿತು. ಅವರೇ ನೇತಾಜಿ.  ಹಸಿರು ಶಾಂತಿ ಸಮೃದ್ಧಿಗಳನ್ನು ಸೂಚಿಸುತ್ತದೆ, ನಿಜ. ಜೊತೆಗೆ ಪ್ರಬಲ ಕೆಂಪಿನ  ಸಾಹಚರ್ಯವಿದ್ದರೆ  ಅದು ಸೊಗಸೆನ್ನಿಸುತ್ತದೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....