DEBOORU.

        ಮಳೆ ಬರುವ ಮುನ್ನ.... 




        ನಂಜನಗೂಡಿನಿಂದ ಹುಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ  ಸ್ವಲ್ಪವೇ ದೂರದಲ್ಲಿ ದೇಬೂರು ಸಿಗುತ್ತದೆ.  ಊರಿನ ತಿರುವಿನಿಂದ ಬಲಕ್ಕೆ ಕಾಲುಹಾದಿಯಲ್ಲಿ ಸಾಗಿದರೆ  ಕಪಿಲಾನದೀತೀರಕ್ಕೆ ತಲುಪುತ್ತೇವೆ. ಅಲ್ಲೊಂದು ಜಲರೇಚಕಾಗಾರವಿದೆ. ಒಮ್ಮೆ ಇದೇ  ವರ್ಷಾಕಾಲದಲ್ಲಿ  ಬೆಳ್ಳಂಬೆಳಗ್ಗೆಯೇ  ಹೋಗಿ ಕಾದೆ, ಮೋಡಗಳು ಕವಿಯುವ ತನಕ.  ಹೀಗೊಂದು ದೃಶ್ಯ ಕಂಡಿತು.


         ಎಕರೆಗಟ್ಟಲೆ ಹರಡಿರುವ ಸ್ಫುಟವಾದ ಕನ್ನಡಿಯಂತೆ ಕಾಣುವ ನಿಶ್ಚಲ ನದೀ ನೀರು [ಏಕೆಂದರೆ- ಮಳೆ ಕಳೆದ ವರ್ಷವೂ  ಸರಿಯಾಗಿ ಆಗಿರಲಿಲ್ಲ],  ಬೆಳಗ್ಗಿನ ಸಮಯದ ಎಳೆಬಿಸಿಲು ಇನ್ನೂ ಸ್ವಲ್ಪ ಮೋಡಗಳಿಂದ ಮುಚ್ಚದೇ  ಉಳಿದಿದೆ, ಬಹುತೇಕ ಆಕಾಶವು ಮೋಡಗಳಿಂದ ತುಂಬಿದೆ, ನೆಲದಲ್ಲಿ ಹಸಿರು ಪಸರಿಸಿ ಅಲ್ಲಲ್ಲಿ ಸಂತೃಪ್ತಿಯನ್ನು ಸೂಚಿಸುತ್ತಿದೆ  ಆದರೆ- ಅದೇ ಆಕಾಶಕ್ಕೆ ಚಾಚಿ ನಿಂತಿರುವ ಮರಗಳು  ಒಣಗಿಹೋಗಿ, ತಮಗೆ ಈ ಹಸಿರ ತೊಡುಗೆ ತೊಡಿಸುವಷ್ಟು  ಮಳೆಯನ್ನು   ತರಲಾರಿರಾ? ಎಂದು ಹೃದಯವಿದ್ರಾವಕವಾಗಿ ಈ ಮೋಡಗಳನ್ನು ಅಂಗಲಾಚುತ್ತಿರುವಂತಿದೆ.  ವೈರುಧ್ಯವನ್ನು ಬಿಚ್ಚಿಡುವ  ಕಾರಣದಿಂದ  ಈ ಚಿತ್ರವು  ನನ್ನ ಸಂಗ್ರಹ ಸೇರಿತು. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....