KUSUBOORU KERE.

ಕುಸುಬೂರು ಕೆರೆ. 



       ಕುಶಾಲನಗರದಿಂದ ಸೋಮವಾರಪೇಟೆಗೆ ಹೋಗುವ ದಾರಿಯಲ್ಲಿ ಘಟ್ಟಪ್ರದೇಶದ ತಿರುವೊಂದರಲ್ಲಿ ಎಡಭಾಗಕ್ಕೆ  ಸುಂದರ ದೃಶ್ಯವೊಂದು ಹಠಾತ್ತನೆ ಅನಾವರಣಗೊಳ್ಳುತ್ತದೆ. ಕಾಫಿಎಸ್ಟೇಟಿನವರು ಬೆಟ್ಟದಿಂದಿಳಿವ ನೀರನ್ನು ತಡೆದು ನಿಲ್ಲಿಸಿ, ಒಂದು ಸಣ್ಣ ಕೆರೆಯನ್ನು ನಿರ್ಮಿಸಿಕೊಂಡಿದ್ದಾರೆ. ಫಾಲ್ಗುಣ-ವೈಶಾಖಗಳ ಹೊರತು ಅಲ್ಲಿ ನೀರು ಇದ್ದೇ  ಇರುತ್ತದೆ. ಈ ತಾಣವು ನನಗೆ ಪರಮಪ್ರಿಯವಾದ್ದರಿಂದ ಆಗಾಗ ಅತ್ತ ಕ್ಯಾಮರಾ ತಿರುಗಿಸುವುದು ರೂಢಿ.


      ಈ ಸಂದರ್ಭದಲ್ಲಿ ನನ್ನ ಆಶಯವೇನಿದ್ದರೂ ಪ್ರತಿಬಿಂಬದ ಕಡೆಗೇ  ಆದರೂ, ಪೂರಕ ಅಂಶಗಳನ್ನೂ ಇಲ್ಲಿ ಸೇರಿಸಲೇಬೇಕೆಂಬುದು ನನ್ನ ವಾದವಾಗಿತ್ತು. ಮುನ್ನೆಲೆಯೆಲ್ಲಿ ಕಾಣುವ ಮಣ್ಣು-ಬಣ್ಣವು ಇಡೀ ಚಿತ್ರವನ್ನು ಆವರಿಸಿರುವ ಹಸಿರು-ನೀಲಿ ಬಣ್ಣಗಳ ಮೇಲಾಟವನ್ನು ತಗ್ಗಿಸುತ್ತದೆ.  ತೆಂಗಿನಮರಗಳ ಸಾಲು, ಈ ಪರಿಸರದ ಮಧ್ಯೆ ವಿಶಿಷ್ಟವಾದ ಅಸ್ಮಿತೆಯನ್ನುಂಟುಮಾಡುತ್ತಿದೆ- ತನ್ನ ಎತ್ತರದ ನಿಲುವಿನಿಂದ. [ಕೊಡಗಿನಲ್ಲಿ ತೆಂಗು ಸ್ವಲ್ಪ ಅಪರೂಪವೇ.]  ತನ್ನ ಮುಂದಿರುವ ಕೆರೆ ಇತ್ಯಾದಿಗಳಿಗೆ ತಮ್ಮ ಇರವಿನಿಂದಾಗಿ ಅಭಯವನ್ನುಂಟುಮಾಡುತ್ತಿರುವಂತಿವೆ.  ಇದು ವಾಸ್ತವವೂ ಹೌದು.   ತೆಂಗು ನೆಲೆದ ಸವಕಳಿಯನ್ನು ತಡೆಯುತ್ತದೆ ಎಂಬುದು ಸರ್ವವಿದಿತ.  

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....