About....

'ನವಿಲುಗರಿ' ಗಳನ್ನು  ನೋಡಹೋಗುವ  ಮುನ್ನ ... 



     ಇದು ಕೇವಲ ಒಂದೊಂದೇ ಚಿತ್ರವನ್ನು ಕುರಿತು ಬರೆಯಲ್ಪಟ್ಟ ಕಿರುಬರಹಗಳ ಗೊಂಚಲು .  ದಾರಿಯಲ್ಲಿ  ಹೋಗುತ್ತಿರುವಾಗ  ಅತ್ತಿತ್ತ  ಸೆರೆಸಿಕ್ಕ ಸಣ್ಣಪುಟ್ಟ  ಸಂಗತಿಗಳನ್ನು  ದೃಶ್ಯಗಳಾಗಿ  ವ್ಯಾಖ್ಯಾನಿಸುವ  ಪ್ರಯತ್ನಗಳು  ಹೀಗಿವೆ. ಇಡಿಯಾಗಿ  ಕಥಾರೂಪವಾಗಿ  ವಿವರಿಸಲ್ಪಟ್ಟ  ಪೋಸ್ಟುಗಳು  'ವಿಪ್ರೇಕ್ಷ್ಯ' ಬ್ಲಾಗಿನ ತಿರುಳಾದರೆ,  ಬಿಡಿಬಿಡಿಯಾಗಿ   ಕಂಡ  ಚಿತ್ರಗಳನ್ನು ಅವುಗಳ  ಹಿನ್ನೆಲೆಗಳನ್ನೂ  ಸಣ್ಣ  ವಿವರಣೆಯ ಸಹಿತವಾಗಿ  ಮಂಡಿಸುವುದು -  'ನವಿಲುಗರಿ' ಯ  ಉದ್ದೇಶ.

      ಈ ವಿವರಣೆಗಳು ಚಿತ್ರಸೃಷ್ಟಿಯ ಕಲಾತ್ಮಕತೆಯ ಕುರಿತಾಗಿರಬಹುದು ಅಥವಾ ಆಯಾ ಸಂದರ್ಭದ ಹಿನ್ನೆಲೆಯಾಗಿರಬಹುದು ಮತ್ತದು  ಕೆಲವೊಮ್ಮೆ  ವಿಡಂಬನೆಯೂ  ಆಗಿರಬಹುದು.  ನೋಡುವ  ಸಂತೋಷ ನಿಮ್ಮದಾಗಲಿ.

     ವಿಮರ್ಶೆ, ಟೀಕೆಗಳಿಗೆ ತುಂಬುಹೃದಯದ ಸ್ವಾಗತವಿದೆ.

      ಬನ್ನಿ, ಒಳಗೆ ಹೋಗೋಣ.....

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....