RAJENDRAVIHAR PALACE SHOT FROM ZOO.

        ಮೃಗಾಲಯದಿಂದ ಕಂಡ ಮಹಾರಾಜಾಲಯ .... 




        ಕಳೆದವರ್ಷದಲ್ಲೊಂದು ದಿನ ನನ್ನ  ೭೦-೩೦೦ಮಿಮೀ ದೂರದರ್ಶಿ ಮಸೂರವನ್ನು ಮೃಗಾಲಯಕ್ಕೆ ಒಯ್ದಿದ್ದೆ.  ವನ್ಯಜೀವಿ ಛಾಯಾಗ್ರಹಣವವು ನನ್ನ ತುತ್ತಲ್ಲ; ಎಂದೂ ನನ್ನ ಆಸಕ್ತಿಯಾಗಿರಲಿಲ್ಲ . ಅಂದುಮಾತ್ರ ಈ ದೂರದರ್ಶಿ ಮಸೂರದ ಸದ್ಬಳಕೆ ಮಾಡುವ ಇರಾದೆಯಿಂದ ಹುಲಿ-ಸಿಂಹಾದಿಗಳು ಸಿಕ್ಕರೆ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ.  ಮೃಗಾಲಯದಲ್ಲಿ ಹುಲಿಗಳಿರುವ ಆವರಣವನ್ನು ತಲುಪಿ, ಕ್ಯಾಮರಾವನ್ನು ಸಿದ್ಧಪಡಿಸಿಕೊಂಡೆ ಕೂಡಾ. ತುತ್ತೂರಿಯಂತಿರುವ ಬೃಹತ್ ಮಸೂರಗಳನ್ನು ಗುರಿಯಿಟ್ಟುಕೊಂಡು ಕಾಯುತ್ತಿದ್ದ ಕೆಲವು ಅಭ್ಯಾಸಿಗಳನ್ನೂ, ಹಾಗಲ್ಲದೆ ಚರವಾಣಿಗಳ ಕ್ಯಾಮರಾಗಳನ್ನು[Cell Phone Camera]  ಗುರಿಮಾಡಿ ಹಿಡಿದ  ನೂರಾರು ಜನರನ್ನೂ ನೋಡಿದೆ.  ನಾನು ಇತೋ ಭ್ರಷ್ಟ: ತತೋ ಭ್ರಷ್ಟ: ಏಕೆಂದರೆ, ನನ್ನ ಉಪಕರಣವು ಆ ಅಭ್ಯಾಸಿಗಳದ್ದಂತೆ ಮಹಾಸಮರ್ಥವಲ್ಲ; ಇತ್ತ ಚರವಾಣಿಯ ಕ್ಯಾಮರಾದಿಂದಲೇ  ಎಲ್ಲವನ್ನೂ ಸೆರೆಹಿಡಿಯಬಲ್ಲೆನೆಂಬುವ ಛಾತಿಯೂ ನನಗಿಲ್ಲ. 

        ಹುಲಿಯು ಮರೆಯಿಂದ ಹೊರಗೆ ಬಂದಿತು. ರಾಜಗಾಂಭೀರ್ಯದಿಂದ ಅತ್ತಿತ್ತ ನೋಡುತ್ತಾ ನಡೆದು ಬರುತ್ತಿದ್ದ ಅದರ ಠೀವಿಯೇ  ಒಂದು ಸೊಗಸು. ಇತ್ತ  ನೆರೆದ ಜನಸ್ತೋಮದಲ್ಲಿ ತುಮುಲವೇ ಉಂಟಾಯಿತು. ಎಲ್ಲರೂ  ಅತ್ತ ತಿರುಗಿ, ಯಥಾಶಕ್ತಿ  ತಂತಮ್ಮ  ಕ್ಯಾಮರಾಗಳನ್ನು ಗುರಿಮಾಡಿ ಕ್ಲಿಕ್ಕಿಸಲಾರಂಭಿಸಿದರು, ಸಂಭ್ರಮದ ಹೂಂಕಾರ-ಕ್ರೇ೦ಕಾರಗಳಾದವು. ನನ್ನ ಸ್ಥಿತಿ ಇಕ್ಕಟ್ಟಾಯಿತು.  ಹುಲಿ ಓಡಾಡುತ್ತಿದ್ದುದು ಸುಮಾರು ೧೮೦-೨೦೦ಮೀಟರುಗಳ ದೂರದಲ್ಲಿ.  ತುತ್ತೂರಿ ಮಸೂರಗಳಿಗೆ ಮಾತ್ರ ತುತ್ತಾಗುವ ಪರಿಧಿಯದು, ನನ್ನ  ೭೦-೩೦೦ಮಿಮೀ  ಮಸೂರಕ್ಕಲ್ಲ.  ಹಾಗಾಗಿ ನಾನು ಬೇರೇನೂ ತೋಚದೆ ಅಲ್ಲಿಂದ ಹೊರಡಲನುವಾದೆ. ಹಾಗೆ ಹೊರಡಲು ತಿರುಗಿದಾಗ  ಬಲಕ್ಕೆ ಎತ್ತರದಲ್ಲಿ ಮರಗಳ ನಡುವೆ ಕಂಡಿದ್ದೇ  ಈ ದೃಶ್ಯ! 

     ದೂರದಲ್ಲಿ ಚಾಮುಂಡಿಬೆಟ್ಟದ ತುಟ್ಟತುದಿಯಲ್ಲಿ  ಮೈಸೂರು ಮಹಾರಾಜರ ರಾಜೇಂದ್ರವಿಹಾರ  ಅರಮನೆಯಿದೆಯಷ್ಟೇ?  ಅದು ಸರಿಯಾಗಿ ನಾನು ನಿಂತ ಸ್ಥಳದಿಂದ ಹೀಗೆ ಕಾಣುತ್ತಿತ್ತು. ಮತ್ತೇನೂ ಯೋಚಿಸದೇ  ಕ್ಲಿಕ್ಕಿಸಿದೆ; ಇಲ್ಲಿ ತಂದು ಟಂಕಿಸಿದೆ. ದೂರದರ್ಶಿ ಮಸೂರಗಳ  ಸಾಮರ್ಥ್ಯ ಹೇಗಿರುತ್ತವೆ ಗಮನಿಸಿ.. ಎಲ್ಲೋ ಬೆಟ್ಟದ ತುದಿಯಲ್ಲಿರುವ ಕಟ್ಟಡ ಇಲ್ಲಿ ದೂರದ ಮೃಗಾಲಯದೊಳಗಿಂದಲೇ   ಅಚ್ಚುಕಟ್ಟಾಗಿ ಕಾಣುತ್ತದೆ ಅಲ್ಲವೇ? 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....