UNIQUE PLACE TO SLEEP...

ಅಪೂರ್ವ ನಿದ್ರಾವಿಧಾನ... 


 
    ನಗರದ ಬಾಲಗಂಗಾಧರನಾಥ ಮೇಲ್ದಾರಿಯಿಂದ ಕೆ. ಆರ್. ಮಾರುಕಟ್ಟೆಗೆ ಇಳಿಯುವ ಕವಲಿನ  ಬಲಭಾಗದಲ್ಲಿ  ಕಂಡ ದೃಶ್ಯವಿದು. ಒಬ್ಬಾನೊಬ್ಬ ವ್ಯಕ್ತಿಯು, ರಸ್ತೆಯಲ್ಲಿ ಸಂಚಾರನಿಯಂತ್ರಣದ ಬಳಕೆಗೆಂದು ಇಡಲಾಗಿದ್ದ ಕಬ್ಬಿಣದ ತಡೆಗೋಡೆಯನ್ನೇ ತನಗೆ ಬಿಸಿಲಿನಿಂದ ಹಾಗೂ  ಧಾವಿಸಿ ಬರುವ ವಾಹನಗಳಿಂದ ರಕ್ಷಿಸಿಕೊಳ್ಳಲು ಏರ್ಪಾಡು ಮಾಡಿಕೊಂಡು ಗಡದ್ದಾಗಿ ನಿದ್ರಿಸುತ್ತಿದ್ದ! ನಿದ್ರೆ, ಶ್ರಮಬಾಹುಳ್ಯಜನ್ಯವಾದದ್ದೇ ಅಥವಾ ಅತಿಮದ್ಯಪಾನಮೂಲವಾದದ್ದೇ ಎಂಬ ಜಿಜ್ಞಾಸೆ ಇಲ್ಲಿ ಅಪ್ರಸ್ತುತ. 

        ನಡೆದುಹೋಗುವುದಕ್ಕೇ  ಸ್ಥಳವಿಲ್ಲದೇ ಕಿಷ್ಕಿಂಧಾದಂತಿರುವ ಈ ಮಾರ್ಗದಲ್ಲಿ ಅದುಹೇಗೋ ಹುಡುಕಿಕೊಂಡು ಸಾಲದ್ದಕ್ಕೆ ಸಿಕ್ಕ ತಡೆಗೋಡೆಯನ್ನೇ ಅಡ್ಡವಿಟ್ಟುಕೊಂಡು ನೆಮ್ಮದಿಯಾಗಿ ನಿದ್ರೆಹೋದ ಆತನ ಪ್ರವೃತ್ತಿಗೊಂದು ಶರಣು. 

Comments