MOCKERY OF DEMOCRACY...

  ಮಂಟಪದಲ್ಲಿ ಶುನಕ; ಪ್ರಜಾಪ್ರಭುತ್ವದ  ಅಣಕ!


        ನಗರದ ಉದ್ಯಾನವೊಂದರ  ಬದಿಯಲ್ಲಿ ಹಾದುಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವಿದು.  ಆ ಉದ್ಯಾನದ ಒಳಗೆ ನಿರ್ಮಿಸಿರುವ ಮಂಟಪವೊಂದರಲ್ಲಿ ಬೀದಿನಾಯಿಯೊಂದು ಕುಳಿತಿತ್ತು.  ಅದನ್ನು ನೋಡಿ, ನನಗೆ ಸ್ವಾತಂತ್ರ್ಯಾನಂತರದ ನಮ್ಮ ದೇಶದ ಪ್ರಜಾಪ್ರಭುತ್ವದ ಸ್ಥಿತಿ-ಗತಿಗಳು ಒಂದು ದೃಶ್ಯವಾಗಿ- ರೂಪಕವಾಗಿ  ಕಣ್ಣಿಗೆ ರಾಚಿದಂತಾಗಿ. ಅನಾಮತ್ತು ಕ್ಲಿಕ್ಕಿಸಿಕೊಂಡೆ. 

        ಇಲ್ಲಿ ನಾನು ನಾಯಿಯನ್ನು ಹೀನತೆಯ ಸಂಕೇತವಾಗಿ ಅರ್ಥೈಸುತ್ತಿದ್ದೇನೆ; ನಿಷ್ಠೆ ಎಂಬ ಸಕಾರಾತ್ಮಕ ಅರ್ಥದಲ್ಲಲ್ಲ.  ಈ ಇಂಗಿತವನ್ನು ಮನದಲ್ಲಿಟ್ಟುಕೊಂಡು ನೋಡಬೇಕು.   ಮೊದಲೇ ನಾಯಿ; ಮೇಲಾಗಿ ಬೀದಿನಾಯಿ, ಸುಂದರವಾಗಿ ನಿರ್ಮಿಸಿದ ಉದ್ಯಾನದಲ್ಲಿ  ಸರಿಯಾದ ನಿರ್ಬಂಧವ್ಯವಸ್ಥೆಯಿಲ್ಲದೇ  ಒಳಗೆ ನುಗ್ಗಿದೆ,  ಅಲ್ಲಿದ್ದ  ಮಂಟಪವೊಂದರಲ್ಲಿ [ಅದು ಖಂಡಿತವಾಗಿಯೂ ಈ ನಾಯಿಗಳಿಗೆಂದು ಮಾಡಿದ್ದಲ್ಲ!] ಹೋಗಿ ವಿರಾಜಮಾನವಾಗಿ ಕುಳಿತಿತು! ಎಂಥಾ ವಿಪರ್ಯಾಸ? ಇದನ್ನಲ್ಲವೇ ಈಗ ನಾವು ಪ್ರಜಾಪ್ರಭುತ್ವ ಎಂದು ಭ್ರಮಿಸಿಕೊಂಡು ಬೀಗುತ್ತಿರುವುದು?  ಹೀನಸ್ವಭಾವದ, ಅದಕ್ಕಿಂತಾ ಹೀನಹಿನ್ನೆಲೆಯಿರುವವನೊಬ್ಬ, ಅದ್ಭುತವಾದ ಜೀವನಮೌಲ್ಯಗಳಿಂದ ಕೂಡಿರುವ ನಮ್ಮ ಭಾರತದೇಶವೆಂಬ  ಉದ್ಯಾನವನದಲ್ಲಿ, ಮಂಟಪವೆಂದರೆ ಅಧಿಕಾರಸ್ಥಾನ-ಪದವಿಗಳನ್ನು, ತನಗೆ ಅರ್ಹತೆ ಎಳ್ಳಷ್ಟೂ ಇಲ್ಲವಾದಾಗ್ಯೂ  ಹೊಂದಿ ಮೆರೆದ, ಪರದೇಶದವರಿಗೆ ಹಾಸ್ಯಾಸ್ಪದನಾಗಿಯೂ ನಮಗೆ ಲಜ್ಜಾಸ್ಪದನಾಗಿಯೂ  ಪರಿಣಮಿಸಿದ!  ಬೀದಿನಾಯಿಗಳಲ್ಲೂ ಮಮತೆ ತೋರುವವರಿರುವಂತೆ, ಮುಗ್ಧ ಪ್ರಜೆಗಳಿಂದ ಓಲೈಸಿಕೊಂಡ! ತನ್ನಂತೆ ಮಂಟಪಕ್ಕೇರುವ ಬೀದಿನಾಯಿಗಳ ಸಂತತಿಗೆ ಕಾರಣನಾದ!  [ನಿರ್ಬಂಧವ್ಯವಸ್ಥೆ ಸರಿಯಾಗಿದ್ದಿದ್ದರೆ  ಹೀಗಾಗದಿರುತ್ತಿತ್ತೇನೋ?] ಈ ವಿದ್ಯಮಾನಗಳೆಲ್ಲವೂ ಈ ಚಿತ್ರದಿಂದ ದೃಶ್ಯಮಾನವಾದವು. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....