ROAD TO KARIGHATTA.

      ಸರ್ಪವೀಥಿ....



        ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಶ್ರೀರಂಗಪಟ್ಟಣ-ಬಾಬುರಾಯನಕೊಪ್ಪಲಿಗೆ ಮುಂಚೆ ಎಡಕ್ಕೆ ಬನ್ನೂರು ರಸ್ತೆ ಶುರುವಾಗುತ್ತದೆ.  ಅದರಲ್ಲೇ ಮುಂದೆ ಸಾಗಿದರೆ ಅನತಿದೂರದಲ್ಲೇ ಕರಿಘಟ್ಟ ಎಂಬ ಚಿಕ್ಕ ಬೆಟ್ಟ ಸಿಗುತ್ತದೆ.  ಬೆಟ್ಟದ ಮೇಲೆ ಶ್ರೀನಿವಾಸಸ್ವಾಮಿಯ ದೇವಸ್ಥಾನವಿದೆ.  ವಾರಾಂತ್ಯಕ್ಕೊಂದು ವಿಶಿಷ್ಟ ತಾಣ.   ದಶಕದ ಹಿಂದೆ ಬೆಟ್ಟ ಹತ್ತುವ ರಸ್ತೆಯು ಏನೇನೂ ಚೆನ್ನಾಗಿರಲಿಲ್ಲ.  ಇತ್ತೀಚೆಗಿನ ವರ್ಷಗಳಲ್ಲಿ ವ್ಯವಸ್ಥಿತವಾಗಿ ಆಗಿದೆ.  ಇಂದಿನ ಗ್ರಾಸ ಅದೇ. 

        ಕೇವಲ ನಾಲ್ಕಾರು ತೀವ್ರತಿರುವುಗಳಿರುವ ಈ ರಸ್ತೆಯು, ಅಲ್ಲೇ  ಮೇಲೆ ಒಂದು ನಿರ್ದಿಷ್ಟಜಾಗದಿಂದ  ಈ ರೀತಿಯಾಗಿ ಕಾಣುತ್ತದೆ.  ಒಂದೇ ಗುಕ್ಕಿಗೆ ಈ ನಾಲ್ಕೂ ತಿರುವುಗಳು ಕಣ್ತುಂಬುತ್ತವೆ.  ಕ್ಯಾಮರಾದಲ್ಲಿ  ಎಚ್ ಡಿ  ನೆಲೆಗಟ್ಟನ್ನು  ಏರ್ಪಡಿಸಿ  ಚಿತ್ರಿಸಿದ ದೃಶ್ಯವಿದು. 

        ಹೇಳಿ ಕೇಳಿ ಬೆಟ್ಟದೊಡೆಯನೆಂದರೆ ಶ್ರೀನಿವಾಸನೇ .  ಶ್ರೀನಿವಾಸನಿರುವುದು  ಶೇಷಾಚಲದಲ್ಲಿಯೇ.   ಈ ರಸ್ತೆಯೂ ಕೂಡಾ  ಶೇಷನಂತೆ  ಸರ್ಪಾಕೃತಿಯಲ್ಲೇ  ನಿರ್ಮಿತವಾಗಿದೆ!    ತಿರುಪತಿ ಮತ್ತಿತರ ಸ್ಥಳಗಳಲ್ಲಿ ಮಾರ್ಗ ಉದ್ದವಾಗಿರುವುದರಿಂದ  ಈ ರಸ್ತೆಯ ಸರ್ಪಾಕೃತಿ ಅಲ್ಲೆಲ್ಲೂ ಇಷ್ಟು ಮನಮುಟ್ಟುವಂತೆ ಇಲ್ಲ!  


 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....