MAHADEVAPURA.....
ಮಹದೇವಪುರದಲ್ಲಿನ ಜಲರೇಚಕಾಗಾರ..
ಮಹದೇವಪುರವೆಂದರೆ ಛಾಯಾಗ್ರಾಹಕರಿಗೆ ಭೂರಿಭೋಜನ!! ಇಡೀ ಮಹದೇವಪುರದ ಸಮಗ್ರ ಚಿತ್ರಾವಳಿಯ ವಿಚಾರ ಹಾಗಿರಲಿ. ಸದ್ಯದ ಗ್ರಾಸವೆಂದರೆ ಈ ಚಿತ್ರ ಮಾತ್ರ. ಇಲ್ಲಿ ಕ್ಯಾಮೆರಾ ಹಿಡಿದು ಅರಸುತ್ತಾ ಹೋದರೆ ಮಿತಿಯಿಲ್ಲದ ಸಾಧ್ಯತೆಗಳು, ಸ್ಮೃತಿಕೋಶಗಳು ತುಂಬಿ ತುಳುಕುತ್ತವೆ.
ಪ್ರಸ್ತುತ ಚಿತ್ರದಲ್ಲಿ ನಿಶ್ಚಲವಾಗಿರುವ ನೀರು, ಕಾಲುವೆಯಲ್ಲಿ ಹರಿವು ನಿಂತಿರುವುದರಿಂದ ಉಂಟಾಗಿರುವುದು. ಆದ್ದರಿಂದಲೇ ಇಲ್ಲಿ ಪ್ರತಿಬಿಂಬ. ತೆಂಗಿನಮರಗಳ ಸಾಲಿನಿಂದ ಏರ್ಪಟ್ಟಿರುವ ಕಮಾನು ಹಾಗೆ ನೀರಲ್ಲೂ ಪ್ರತಿಬಿಂಬಿಸಿ ಅರ್ಧಚಂದ್ರಾಕೃತಿಯಾಗಿದೆ. ಕಟ್ಟಡಗಳ ಸಾಲು ಅದೇ ಪಾತಳಿಯಲ್ಲಿ ಇದ್ದು, ಅದೇ ಪರಿಸರದಲ್ಲಿನ ಇತರ ವರ್ಣವ್ಯಾಪ್ತಿಗಳ ಜತೆಗೆ ಹದವಾಗಿ ಬೆರೆತಿದೆ. ದೃಶ್ಯ ಸುಂದರವಾಗಿದೆಯಲ್ಲವೇ? ಆದರೆ, ಇಡೀ ಚಿತ್ರದ ಸ್ಥಾವರತ್ವಕ್ಕೆ ಕಾರಣವಾಗಿರುವುದು ಸಾಕಷ್ಟು ಹರಿವಿಲ್ಲದೆ, ಕಡೇಪಕ್ಷ ನಾಲೆಯ ದುರಸ್ತಿಯಾದರೂ ಮಾಡೋಣವೆಂದು ನಿಲ್ಲಿಸಿಕೊಂಡ ನೀರಿನಿಂದ, ನೀರಿನ ಒರತೆಯ ಕೊರತೆಯಿಂದ. ಸಂತಸದ ಹಿಂದೆ ಇರುವ ವಿಷಾದ- ಇದೇ.

Comments
Post a Comment