CURVES IN TAMARASSERY GHAT ROAD.

        ತಾಮರಸ್ಸೆರಿ  ಘಟ್ಟದ ರಸ್ತೆಯಲ್ಲಿನ ತಿರುವುಗಳು. 



         ಸುಲ್ತಾನ್ ಬತೇರಿಯಿಂದ  ಕಲ್ಲಿಕೋಟೆಯ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಕ್ಕಿಡಿ ಗಿರಿಧಾಮವನ್ನು ದಾಟಿದ ಮೇಲೆ  ಸ್ವಲ್ಪ ಮುಂದೆ ಒಂದು ವೀಕ್ಷಣಾಗೋಪುರವಿದೆ. ಅಲ್ಲಿಂದ ಪ್ರಾರಂಭವಾಗುವ ಘಟ್ಟಪ್ರದೇಶ ಕೆಲವು ಮೈಲುಗಳ ನಂತರ ಮುಗಿಯುತ್ತದೆ.  ಆದರೆ ರಸ್ತೆ ಅಗಲವಾಗಿದ್ದರೂ, ಪಕ್ಕದ ಇಳಿಜಾರು ಅತ್ಯಂತ ಕಡಿದಾಗಿದ್ದು ತುಂಬಾ ಅಪಾಯಕಾರಿಯಾಗಿದೆ.  ಈ ವೀಕ್ಷಣಾಗೋಪುರದ ಸಮೀಪದಿಂದ ಒಂದು ಕುತೂಹಲಕಾರಿಯಾದ ದೃಶ್ಯ ಕಾಣಸಿಗುತ್ತದೆ.  ಕೆಳಗೆ ನೇರ ಮುಂದೆ, ಸುಮಾರು ನಾನೂರು ಆಡಿಗಳ ಆಚೆಗೆ,  ಇದೆ ಹೆದ್ದಾರಿಯ ಮುಂದುವರಿದ ಭಾಗ ಕಾಣುತ್ತದೆ. ತಿರುವು ಎರಡು , ಮೂರು ಮತ್ತು ನಾಲ್ಕು  ಇಲ್ಲಿ ಮೇಲಿನಿಂದ ನಮಗೆ ಕಾಣಿಸುತ್ತದೆ.  ನಾವು ನಿಂತಿರುವ ಎತ್ತರದ ಅರಿವು ನಮಗೆ ಉಂಟಾಗುತ್ತದೆ. ಕಥೆ ಅಲ್ಲಿಗೆ ಮುಗಿಯುವುದಿಲ್ಲ,  ಆ ತಿರುವುಗಳಾಚೆಗೂ ಇನ್ನೂ ಪ್ರಪಾತ ಮುಂದುವರೆದಿದ್ದು, ಅಲ್ಲಿಂದ ಮತ್ತೆ ನೂರಿನ್ನೂರು ಅಡಿ ಕೆಳಗೆ ಇಳಿದರೆ ನೆಲಮಟ್ಟಕ್ಕೆ ತಲುಪುತ್ತೇವೆ.  ನಮ್ಮ ಹಿಂದಿನಿಂದ ಸಾಗಿದ ಯಾವುದೇ ವಾಹನವು ಇಪ್ಪತ್ತು ನಿಮಿಷಗಳ ನಂತರ ಸಣ್ಣ ಬೆಂಕಿಪೆಟ್ಟಿಗೆಯ ಗಾತ್ರದಲ್ಲಿ ಈ ತಿರುವುಗಳನ್ನು ದಾಟುವುದನ್ನು ನೋಡಬಹುದು.  ನಿಜವಾಗಿ ಮೈ ನವಿರೇಳಿಸುವಂತಹ  ದೃಶ್ಯಾವಳಿ!
        
        ನಮ್ಮಗಳ ಛಾಯಾಗ್ರಹಣಪಾಟವ  ಇಲ್ಲಿ  ಸೋಲಬಹುದು: ಆದರೆ  ವಾಸ್ತವದ ರುದ್ರರಮಣೀಯತೆ ಇಲ್ಲಿ ಸದಾ ಗೆಲ್ಲುತ್ತದೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....