PROHIBITION

        ನಿರ್ಬಂಧ. 



        ಕಳೆದ ವಾರ ಸೂಚಿಸಲ್ಪಟ್ಟ ಅದೇ ಸ್ಥಳದ ಉತ್ತರದ ತುದಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗುವ ದಾರಿ ಸಾಗುತ್ತದೆ. ಈ ದಾರಿಯಲ್ಲಿ ಒಂದೆರಡು ಮಾರು ಹೋದರೆ ಅದೇ ಹಿನ್ನೀರಿನ ಪ್ರದೇಶ ಸಿಗುತ್ತದೆ. ಅಲ್ಲಿ ಈ ತಂತಿಗಳ ಬೇಲಿ ಹಾಕಲ್ಪಟ್ಟಿದೆ- ಹಿಂದಿನಿಂದಲೂ, ಸಹಜವಾಗಿ.  ಸೂರ್ಯಾಸ್ತವನ್ನು ಚಿತ್ರಿಸಲು ಹೋದವನಿಗೆ ಇದೇಕೋ ಆಕರ್ಷಕವೆನ್ನಿಸಿತು, ಸಂಗ್ರಹಿಸಿದೆ,   ಹೀಗೊಂದು ಮಾರ್ಪಾಡಿಗೆ ಮುಂದೆ ಇದು ದಾರಿಯಾಗಬಹುದೆಂದು ಎಂದೂ ಅನ್ನಿಸಿರಲಿಲ್ಲ. 

           ಪ್ರಶಾಂತವಾದ ಹಿನ್ನೀರು;  ಹಿನ್ನೆಲೆಯಲ್ಲಿ ಮುಳುಗುತ್ತಿರುವ ಸೂರ್ಯ, ರಾಗರಂಜಿತವಾದ ಆಗಸ- ಇವೆಲ್ಲವೂ ಸಂಧ್ಯೆಯ ಸಂಭ್ರಮವನ್ನು ಮನಸ್ಸಿಗೆ ಕಟ್ಟಿಕೊಡುವುದಾದರೂ  ಮುನ್ನೆಲೆಯಲ್ಲಿ ಕಾಣಬರುತ್ತಿರುವ ತಂತಿಬೇಲಿಯು ಇಡೀ ದೃಶ್ಯದ ಒಟ್ಟಂದವನ್ನು ಕ್ರೂರವಾಗಿ ಕೊಲ್ಲುತ್ತಿದೆ-   "ನೀವು ಈ ಆನಂದವನ್ನು ಆಸ್ವಾದಿಸುವಂತಿಲ್ಲ "  ಎಂಬರ್ಥದಲ್ಲಿ. ಅದಕ್ಕೆಂದೇ ಈ ಚಿತ್ರಕ್ಕೆ ನಿರ್ಬಂಧ ಎಂದು ಹೆಸರಿಸಿದ್ದು.   ಈ ವೈರುಧ್ಯದ, ನಿಷೇಧದ ಪ್ರಸ್ತಾಪ  ಮತ್ತು ನಿರೂಪಣೆ ಈಗೇಕೆ ಎಂಬುದು ಸದ್ಯೋವಿದ್ಯಮಾನಗಳನ್ನು ಬಲ್ಲವರಿಗೆ ಅರ್ಥವಾಗದಿರದು. 

        ತುಘಲಕ್ಕನ ಸೈನ್ಯದವರು  ಬಂದು ಮುತ್ತಿಗೆ ಹಾಕಿದರೆ, ಈ ದೃಶ್ಯವೇ ನಮಗಾಗುವ ಗತಿಯಾಗುವುದು ಎಂಬುದು ನನ್ನ ಆತಂಕ.  ನನ್ನ ಕೆಲಮಿತ್ರರು  ಕಳೆದವಾರದ  ಬರಹವನ್ನು ಓದಿ ಇದು ಇತಿಹಾಸವೇ? ಎಂದು ಕೇಳಿದ್ದರು,  ಅವರಿಗೆಲ್ಲಾ ಈ ಮೂಲಕ ಸಣ್ಣ ಸ್ಪಷ್ಟನೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....