SUNSET AT KUKKARAHALLI LAKE.

ಪಾರಂಪರಿಕ ಮಂಟಪ. 



        ಕುಕ್ಕರಹಳ್ಳಿಕೆರೆಯಲ್ಲಿ ಪಾರಂಪರಿಕ ಎನ್ನಬಹುದಾದ ಮಂಟಪವೊಂದಿದೆ.  ಕೆಲವೇ ದಶಕಗಳ ಹಿಂದಿನ ರಚನೆ ಇದಾದರೂ ಇತ್ತೀಚೆಗಿನ  ಬೋಳುಬೋಳಾದ ಶೈಲಿಯ ರಚನೆಗಳಿಗಿಂತ ಎಷ್ಟೋ ಆಪ್ತವೆನಿಸುವುದು.  ವಾಸ್ತವದಲ್ಲಿ ಇದು ಜಲರೇಚಕಾಗಾರವಾಗಿತ್ತು.  ಈಗ  ಪಳೆಯುಳಿಕೆ ಮಾತ್ರವೇ.  ಚಿತ್ರಾಭ್ಯಾಸಿಗಳಿಗೆ  ಮೊಗೆದಷ್ಟೂ ಸಿಗುವ ಸಾಧ್ಯತೆಗಳ  ಖನಿ. 

        ಈ ಮಂಟಪವನ್ನು ಹಂದರದ ಮಧ್ಯೆ ಇರಿಸುವುದರ ಬದಲು  ಇಲ್ಲಿ ಪಕ್ಕಕ್ಕೆ ಯೋಜಿಸಿರುವುದು  ಸೂರ್ಯನನ್ನೂ  ಒಳಗೂಡಿಸಲು.  ಇದರಿಂದ ಈ ಮಂಟಪವು ಟಾರ್ಚ್ ಲೈಟ್ ನಿಂದ ದೀಪ್ತಗೊಳಿಸಿದಂತೆ  ಎದ್ದು ಕಾಣುತ್ತದೆ.  ಎರಡೂ ಚಿತ್ರಧಾತುಗಳನ್ನೂ ಪಕ್ಕಪಕ್ಕ ಯೋಜಿಸಿರುವುದು  ಪಿ ಕೆ ಎಫ್ ರಿಂದ ಕಲಿತ ಪಾಠ. ಬಹುಶಃ ಕದ್ದಿದ್ದು ಎಂದರೆ ಹೆಚ್ಚು ಸೂಕ್ತವಾದೀತು.  ಈ ಒಂದೇ ಒಂದು ಮಂಟಪವನ್ನಿಟ್ಟುಕೊಂಡು  ಹತ್ತು ಹಲವಾರು ದೃಶ್ಯಸಂಯೋಜನೆಗಳನ್ನು ಮಾಡಬಹುದು. 


Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....