ROAD TO ONAKE BETTA.

ಒನಕೆ ಬೆಟ್ಟಕ್ಕೆ ದಾರಿ. 

        ಪಾಂಡವಪುರದಿಂದ ಮಂಡ್ಯಕ್ಕೆ ಸಾಗುವ ದಾರಿಯಲ್ಲಿ  ಚಿಕ್ಕಾಡೆಗೆ ಬಲಕ್ಕೆ ತಿರುಗುವ ಬದಲು ಅಲ್ಲೇ ಎಡಕ್ಕೆ ತಿರುಗಿದರೆ ಈ ರಸ್ತೆ ಸಿಗುತ್ತದೆ. ಇದು ಹೀಗೇ ಮುಂದುವರೆದು ಚಿತ್ರದಲ್ಲಿ ಕಾಣುತ್ತಿರುವ ಕಲ್ಲುಗುಡ್ಡಕ್ಕೆ[ಅದೇ  ಒನಕೆಬೆಟ್ಟ] ದಾರಿಯಾಗುತ್ತದೆ. ಕುಂತಿಬೆಟ್ಟದ ಪಕ್ಕದಲ್ಲೇ ಇರುವ ಇದು ಚಾರಣಪ್ರಿಯರ ನೆಚ್ಚಿನ ತಾಣವೂ ಹೌದು. ಲೋಕಪಾವನೀ ನದಿಯನ್ನು ಹುಡುಕುತ್ತಾ ಹೊರಟ ನನಗೆ ಮಧ್ಯೆ ಈ ದೃಶ್ಯ ಎದುರಾಗಿ ಕ್ಯಾಮರಾದಲ್ಲಿ ಸೆರೆಯಾಯಿತು.  

        ಕಪ್ಪಗೆ ಮಲಗಿರುವ ರಸ್ತೆಯು ಮುಂದೆ ಸಾಗುತ್ತಾ ನಮ್ಮ ನೋಟವನ್ನೂ ಕೀಲಿಸಿಕೊಂಡು ಬೆಟ್ಟದ ಕಡೆಗೆ ಒಯ್ಯುತ್ತದೆ. ಎಡ-ಬಲಗಳ ಹಚ್ಚಹಸಿರು ನಮ್ಮ ಕಣ್ಣಿಗೆ ತಂಪನ್ನುಂಟುಮಾಡುತ್ತದೆ. ಬಿಳಿಮೋಡಗಳಿಂದ ಕೂಡಿರುವ ನೀಲಾಗಸವು ಚಿತ್ರಕ್ಕೆ ಬೇಕಾದ ಹಿಂವ್ಯಾಪ್ತಿಯನ್ನೊದಗಿಸುತ್ತಾ, ಇತ್ತ  ಹಸಿರ ಸಾಮ್ರಾಜ್ಯದ ನಡುವೆ ತಲೆ ಎತ್ತಿರುವ  ಹೆಂಚಿನ ಕಟ್ಟಡಕ್ಕೆ ವೈರುಧ್ಯವನ್ನೂ ಉಂಟುಮಾಡುತ್ತಿದೆ. ಮುನ್ನೆಲೆಯಲ್ಲಿ ಕಾಣುತ್ತಿರುವ ಒಂಟಿಗಿಡವು ಚಿತ್ರಕ್ಕೆ ಆಳವನ್ನು [depth] ಕೊಡುತ್ತಾ, ತಾನು ಬಲಭಾಗದಲ್ಲಿರುವುದರಿಂದ  ಎಡಭಾಗದಲ್ಲಿರುವ ಬೆಟ್ಟಕ್ಕೆ ಸಮತೋಲನ ಸಾಧಿಸುವ ಧಾತುವಾಗಿಯೂ ವರ್ತಿಸುತ್ತದೆ. ಮೊತ್ತವಾಗಿ, ಒಬ್ಬ ಛಾಯಾಗ್ರಾಹಕ ನಿರೀಕ್ಷಿಸುವ ಎಲ್ಲ ವರ್ಣವಿಸ್ತಾರವೂ ಇಲ್ಲಿ ಕಂಡಿದೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....