SILHOUETTING THE HERITAGE LAMP-POST.

       ಪಾರಂಪರಿಕ ದೀಪಸ್ತಂಭ... 


         ಮೈಸೂರು ಅರಮನೆಯ ಆವರಣದಲ್ಲಿರುವ ಅಲಂಕಾರಿಕವಾದ ದೀಪಸ್ತ೦ಭಗಳಲ್ಲೊಂದು ಇದು.  ಅಪರಾಹ್ನ ನಾಲ್ಕೂವರೆಯ ಸುಮಾರಿಗೆ  ಈ ಕಂಬದ ಹಿಂದೆ ಸೂರ್ಯನ ಬಿಂಬವಿತ್ತು.  ಸಾಕಷ್ಟು ಮೋಡಗಳೂ ಸುತ್ತಮುತ್ತ ಜಮಾವಣೆಗೊಂಡದ್ದರಿಂದ  ಸ್ವಲ್ಪ ರೋಚಕವಾಗಿ ಕಂಡಿತು.  ಈ ನೋಟವನ್ನು ಮತ್ತಷ್ಟು ಅದ್ಭುತಗೊಳಿಸಲು  ನನ್ನ ಕ್ಯಾಮರಾದ  ಬೆಳಕಿನ ವರ್ಣನಿರ್ಣಯಸೌಕರ್ಯವನ್ನು  ಪಲ್ಲಟಗೊಳಿಸಿ,  ಕ್ಲಿಕ್ಕಿಸಿ, ಹಾಗೆ ಬಂದ  ಚಿತ್ರವನ್ನು ಆಕರವಾಗಿ ಬಳಸುವಂತೆ ಕ್ಯಾಮರಾಕ್ಕೆ  ನಿರ್ದೇಶಿಸಿ, ಪುನಃ ಕ್ಲಿಕ್ಕಿಸಿದೆ.  ಮೋಡಗಳ ಬಣ್ಣದಲ್ಲಿ ವಿಶಿಷ್ಟವಾದ ನೀಲಿಛಾಯೆಯೂ, ಆಕಾಶದಲ್ಲಿ ಜ್ವಾಲೆಯಂತಹ ಹಳದೀಬಣ್ಣವೂ ಪ್ರಾಪ್ತವಾಯಿತು.  ಚೌಕಟ್ಟಿನ ಬಲಗಡೆ ಎತ್ತರದಲ್ಲಿ ಈ ವಿಲಾಸವಾದರೆ  ಎಡಕ್ಕೆ ಸ್ವಲ್ಪ ಕೆಳಭಾಗದಲ್ಲಿ  ಈ ದೀಪಸ್ತ೦ಭವನ್ನು  ಯೋಜಿಸಿಕೊಂಡೆ-  ಇಡೀ ಚೌಕಟ್ಟಿಗೊಂದು ಸಮತೋಲನವನ್ನುಂಟುಮಾಡಲು.. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....