GREENS NEAR AMPHITHEATRE, MYSOORU.

   ಬಯಲುರಂಗಮಂದಿರದ ಹಿಂದಿನ ಹಸಿರಹಾದಿ. 




          ಅಭಿವೃದ್ಧಿಯ ನೆಪದಲ್ಲಿ ವಿರೂಪಕ್ಕೊಳಗಾಗಿರುವ ಎರಡು ಸ್ಥಳಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇನೆ. ಈ ವಾರ ಒಂದು, ಮುಂದಿನವಾರ ಮತ್ತೊಂದು. 
         
          ಮೈಸೂರಿನ ಮಾನಸಗಂಗೋತ್ರಿಯ ಬಯಲುರಂಗಮಂದಿರ ಮತ್ತಿತರ ಸ್ಥಳಗಳನ್ನು ಇತ್ತೀಚೆಗೆ  ಶತಮಾನೋತ್ಸವದ ಅಂಗವಾಗಿ ನವೀಕರಿಸಲಾಯಿತು.   ಸ್ವತಃ ರಾಷ್ಟ್ರಪತಿಗಳೇ ಬರುವವರಿದ್ದರಾಗಿ  [ವಿ ವಿ ಯ ಘಟಿಕೋತ್ಸವಕ್ಕೆ] ಈ ಬಯಲುರಂಗಮಂದಿರದ  ನವೀಕರಣವು, ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿತು.  ಈ ಸಂಭ್ರಮಕ್ಕೆ ಇಲ್ಲಿ ಎಡಭಾಗದಲ್ಲಿರುವ ಬಡಪಾಯಿ ಮರಗಳು ತುತ್ತಾಗಬೇಕಾಯಿತು. "ವೈದೇಹೀಹರಣಂ ಜಟಾಯುಮರಣಂ " ಎಂಬ ಶ್ಲೋಕಭಾಗವನ್ನು,  "ಕಾಂಕ್ರೀಟೀಕರಣಂ ನಿಸರ್ಗಹನನಮ್ " ಎಂದು ಬದಲಿಸಿ ಮನನ  ಮಾಡಿಕೊಳ್ಳುವಂತೆ ಅದ್ಭುತವಾಗಿ ನಡೆಯಿತು.  ಇಲ್ಲಿಯವರೆಗೆ ಕೇವಲ ನನ್ನ ಗಣಕದ ಮುಖಪರದೆಯಲ್ಲಿ   ಇದ್ದು ನನಗೆ ಮಾತ್ರ ಸಂತೋಷಪ್ರದವಾಗಿದ್ದ ಈ ಚಿತ್ರವನ್ನು, ಈ ರೂಪಾಂತರದ ನಂತರ, ಮುಂದೆಂದೂ ಕಾಣಸಿಗದ  ನಶಿಸಿಹೋದ ಪ್ರಾಣಿಸಂಕುಲದಂತೆ  ಭಾವಿಸಿ, ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ  ಇಲ್ಲಿ ಟಂಕಿಸಿರುವೆನು. ಈಗ ಇದೇ ಸ್ಥಳವು ಹೇಗಾಗಿದೆ ಎಂಬುವುದು  ಪ್ರತ್ಯಕ್ಷವೇ. 

Comments

Post a Comment